ETV Bharat / international

ರಷ್ಯಾ ವಿರುದ್ಧ ಕ್ರಮಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ತುರ್ತು ಅಧಿವೇಶನ: ಮತದಾನದಿಂದ ದೂರ ಉಳಿದ ಭಾರತ

author img

By

Published : Feb 28, 2022, 7:10 AM IST

ರಾಜತಾಂತ್ರಿಕತೆ ಮತ್ತು ಮಾತುಕತೆಗಳ ಮೂಲಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಬೆಲಾರಸ್ ಗಡಿಯಲ್ಲಿ ಉಭಯ ರಾಷ್ಟ್ರಗಳು ಮಾತುಕತೆ ನಡೆಸಲು ಒಪ್ಪಿರುವುದು ಒಳ್ಳೆಯ ಬೆಳವಣಿಗೆ- ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವು.

procedural
ದೂರ ಉಳಿದ ಭಾರತ

ವಿಶ್ವಸಂಸ್ಥೆ(ನ್ಯೂಯಾರ್ಕ್): ಉಕ್ರೇನ್ ಮೇಲೆ ರಷ್ಯಾದ ದಾಳಿಯ ವಿರುದ್ಧ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ತುರ್ತು ಅಧಿವೇಶನ ಕರೆಯಲು ನಡೆದ ಮತದಾನದಿಂದ ಭಾರತ ದೂರ ಉಳಿದಿದೆ. ಇದೇ ವೇಳೆ, ಬೆಲಾರಸ್​ನಲ್ಲಿ ಉಕ್ರೇನ್​ ಮತ್ತು ರಷ್ಯಾ ಮಾತುಕತೆಗೆ ಒಪ್ಪಿಕೊಂಡಿದ್ದನ್ನು ಸ್ವಾಗತಿಸಿತು.

ಸಾಮಾನ್ಯ ಸಭೆ ಕರೆಯುವ ಪರವಾಗಿ 15 ಮತಗಳಲ್ಲಿ 11 ಮತಗಳು ಬಂದಿದ್ದು, ಸೋಮವಾರ ಬಿಕ್ಕಟ್ಟಿನ ಕುರಿತು ಸಾಮಾನ್ಯ ಸಭೆ ನಡೆಯಲಿದೆ. ಭಾರತ, ಚೀನಾ ಮತ್ತು ಯುಎಇ ಮತದಾನದಿಂದ ದೂರ ಉಳಿದಿದ್ದವು. ರಷ್ಯಾ, ಈ ಸಭೆ ನಡೆಸುವ ನಿರ್ಣಯದ ವಿರುದ್ಧ ಮತ ಚಲಾಯಿಸಿತು. 1950ರ ಬಳಿಕ ವಿಶ್ವಸಂಸ್ಥೆಯಲ್ಲಿ ಕರೆದ ಸಾಮಾನ್ಯ ಸಭೆಯ 11ನೇ ತುರ್ತು ಅಧಿವೇಶನ ಇದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಕಾಯಂ ಸದಸ್ಯ ಟಿ.ಎಸ್.ತಿರುಮೂರ್ತಿ, 'ಉಕ್ರೇನ್​ನಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದು ವಿಷಾದನೀಯ. ರಾಜತಾಂತ್ರಿಕತೆ ಮತ್ತು ಮಾತುಕತೆಗಳ ಮೂಲಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಬೆಲಾರಸ್ ಗಡಿಯಲ್ಲಿ ಉಭಯ ರಾಷ್ಟ್ರಗಳು ಮಾತುಕತೆ ನಡೆಸಲು ಒಪ್ಪಿರುವುದು ಒಳ್ಳೆಯ ಬೆಳವಣಿಗೆ' ಎಂದು ಹೇಳಿದರು.

ಇದನ್ನೂ ಓದಿ: ಉಕ್ರೇನ್‌ಗೆ ಅಮೆರಿಕ ಶಸ್ತ್ರಾಸ್ತ್ರ ನೆರವು; ವಿಮಾನ ಹೊಡೆದುರುಳಿಸುವ ಸ್ಟಿಂಗರ್‌ ಕ್ಷಿಪಣಿ ಪೂರೈಕೆಗೆ ಒಪ್ಪಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.