ಪೆರೆಸ್ಲಾವ್ಲ್-ಜಲೆಸ್ಕಿ(ರಶ್ಯಾ) : ಏಪ್ರಿಲ್ ತಿಂಗಳಿನಲ್ಲಿ ನಡೆಯಬೇಕಿದ್ದ ಅಂತಾರಾಷ್ಟ್ರೀಯ ಏರೋನಾಟಿಕ್ಸ್ ಫೆಸ್ಟಿವಲ್, ಈ ಬಾರಿ ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದು, ಕೊನೆಗೂ ಜುಲೈ 16 ರಿಂದ 19ರವರೆಗೆ ನಡೆದಿದೆ.
ಪ್ರತೀ ವರ್ಷದ ಏಪ್ರಿಲ್ ಸಂದರ್ಭದಲ್ಲಿ ಭವ್ಯವಾಗಿ ಆಕಾಶದಲ್ಲಿ ಹಾರಿಸಲಾಗುವ ಆಕಾಶ ಬುಟ್ಟಿಯ ಕಾರ್ಯಕ್ರಮ ಇದಾಗಿದ್ದು, 15 ವರ್ಣರಂಜಿತ ಆಕಾಶಬುಟ್ಟಿಗಳು ರಷ್ಯಾದ ಪಟ್ಟಣವಾದ ಪೆರೆಸ್ಲಾವ್ಲ್-ಜಲೆಸ್ಕಿಯಲ್ಲಿ ಕಂಗೊಳಿಸುತ್ತವೆ. ಈ ಬಾರಿ ಕೊರೊನಾ ವೈರಸ್ ತೊಂದೊಡ್ಡಿದ ಸಂಕಷ್ಟದಿಂದ ಇದು ಸಾಧ್ಯವಾಗಿರಲಿಲ್ಲ. ಆದರೆ, ಏರೋನಾಟಿಕ್ಸ್ ಫೆಸ್ಟಿವಲ್ಗೆ ರಷ್ಯಾದಲ್ಲಿ ಬಹು ಬೇಡಿಕೆಯಿದ್ದು, ಜುಲೈ 16 ರಿಂದ 19ರವರೆಗೆ, ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಯಿತು.
ಏರೋನಾಟಿಕ್ಸ್ ಫೆಸ್ಟಿವಲ್ನ 19ನೇ ಆವೃತ್ತಿಯಾಗಿ ಮೊನ್ನೆ ಈ ಹಬ್ಬ ರಷ್ಯಾದಲ್ಲಿ ನಡೆದಿದ್ದು, ತಕ್ಕಮಟ್ಟಿಗೆ ಅದ್ದೂರಿಯಾಗಿಯೇ ಆಚರಣೆ ಮಾಡಲಾಯಿತು. ಪ್ರತೀ ವರ್ಷದಂತೆ ರಾತ್ರಿಯ ಪ್ರದರ್ಶನ ಸೇರಿ ಕೆಲವು ಅಂಶಗಳನ್ನು ಕೊರೊನಾ ಕಾರಣದಿಂದಾಗಿ ಸಂಘಟಕರು ರದ್ದುಪಡಿಸಿದ್ದರು.
ಈ ಹಬ್ಬದಲ್ಲಿ ಪಾಲ್ಗೊಂಡ ಸಾಕಷ್ಟು ಜನ ವಿಮಾನದಲ್ಲಿ ಹಾರಾಟ ನಡೆಸಿದಷ್ಟೇ ಸಂತೋಷದಾಯಕವಾಗಿರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಎಸ್ಸೆಂಟುಕಿ, ಬೆಲ್ಗೊರೋಡ್, ಸಮಾರಾ, ಕಲುಗಾ, ಸೇಂಟ್ ಪೀಟರ್ಸ್ಬರ್ಗ್ ಮತ್ತು ಮಾಸ್ಕೋ ಪ್ರದೇಶದ 17 ಮಂದಿ ಭಾಗವಹಿಸಿದ್ದರು.