ಫ್ರಾನ್ಸ್ : ಈ ಬಾರಿಯ ಬೇಸಿಗೆಯಲ್ಲಿ ಎಂದೂ ಕಂಡರಿಯದ ರೀತಿ ಬಿಸಿಲು ಉದ್ಭವಿಸಿರುವ ಕಾರಣ ಪ್ಯಾರೀಸ್, ಲಂಡನ್ ಸೇರಿದಂತೆ ಸಂಪೂರ್ಣ ಯುರೋಪ್ನ ಜನ ತತ್ತರಿಸಿದ್ದಾರೆ. ಅಧಿಕ ಬಿಸಿಲಿನಿಂದ ಮಾರಣಾಂತಿಕವಾಗಿ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ಬಸವಳಿದಿದ್ದಾರೆ.
ಪ್ಯಾರೀಸ್ನಲ್ಲಿ ಗುರುವಾರ 42.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. 1947ರಲ್ಲಿ 40.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದುವರೆಗಿನ ದಾಖಲೆಯಾಗಿತ್ತು. ಆದರಿಂದು ಅದನ್ನು ಮೀರಿಸಿದ್ದು, ಆಲ್ ಟೈಂ ರೆಕಾರ್ಡ್ ಆಗಿದೆ.
ಅದೇ ರೀತಿ ಬೆಲ್ಜಿಯಂನಲ್ಲಿ 41.8 ಡಿ. ಸೆ., ಜರ್ಮನಿಯಲ್ಲಿ 41.5 ಡಿ. ಸೆ., ಲುಕ್ಸಂಬರ್ಗ್ 40.8 ಡಿ. ಸೆ. ಮತ್ತು ನೆದರ್ಲ್ಯಾಂಡ್ನಲ್ಲಿ40.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹವಾಮಾನದಲ್ಲಿನ ವೈಪರೀತ್ಯದಿಂದಾಗಿ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಎನ್ನಲಾಗ್ತಿದೆ.
ಈ ರಣ ಬಿಸಿಲಿಗೆ ಬೆಚ್ಚಿಬಿದ್ದ ಫ್ರಾನ್ಸ್ ಅಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದಾರೆ. ಅಲ್ಲದೆ, 42 ರಿಂದ 43 ಡಿಗ್ರಿ ಸೆಲ್ಸಿಯಸ್ಗೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ. ಮನೆಯಿಂದ ಹೊರಬರದಂತೆ ಜನರಿಗೆ ಸರ್ಕಾರ ಸಲಹೆ ನೀಡಿದೆ.