ಬರ್ಲಿನ್ (ಜರ್ಮನಿ): ಬಿ.1.1.6 ಎಂದು ಕರೆಯಲ್ಪಡುವ ರೂಪಾಂತರಿ ಕೊರೊನಾ ವೈರಸ್ನ ಪ್ರಕರಣವೊಂದು ಜರ್ಮನಿಯ ಕೇಂದ್ರ ನಗರ ಹಾಲೆನಲ್ಲಿ ಪತ್ತೆಯಾಗಿದೆ ಎಂದು ಮೇಯರ್ ಬರ್ನ್ಡ್ ವೈಗಾಂಡ್ ಹೇಳಿದ್ದಾರೆ.
ಸ್ಥಳೀಯ ಆಸ್ಪತ್ರೆ ಉದ್ಯೋಗಿಯೊಬ್ಬರಲ್ಲಿ ಪತ್ತೆಯಾಗಿದ್ದು, ಅವರನ್ನು ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಈಕೆಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದು ಇನ್ನು ತಿಳಿದು ಬಂದಿಲ್ಲ. ಈ ಹಿಂದೆ ನಾರ್ವೆ ಮತ್ತು ಲಕ್ಸೆಂಬರ್ಗ್‌ನಲ್ಲಿ ರೂಪಾಂತರಿ ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿದ್ದವು ಎಂದರು.
ಓದಿ: ‘ಭಯೋತ್ಪಾದನೆ, ಹಗೆತನವಿಲ್ಲದ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ’
ನಾರ್ವೇಜಿಯನ್ ಅಥವಾ ಲಕ್ಸೆಂಬರ್ಗನ್ ಎಂದು ಕರೆಯಲ್ಪಡುವ ಈ ರೂಪಾಂತರ ಕೊರೊನಾ ವೈರಸ್ ಅತೀ ಹೆಚ್ಚಿನ ಸೋಂಕಿನ ಪ್ರಮಾಣ ಹೊಂದಿದ್ದು, ತೀವ್ರವಾದ ಕಾಯಿಲೆಗೆ ಕಾರಣವಾಗುತ್ತದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಬಿ .1.1.6 ರೂಪಾಂತರ ವೈರಸ್ 2020ರ ಕೊನೆಯಲ್ಲಿ ಲಕ್ಸೆಂಬರ್ಗ್‌ನಲ್ಲಿ ಹುಟ್ಟಿಕೊಂಡಿದೆ ಎಂದು ವರದಿಯಾಗಿದೆ.