ಪ್ಯಾರಿಸ್ (ಫ್ರಾನ್ಸ್): ಕೋವಿಡ್-19 ಪತ್ತೆಗಾಗಿ ಲಾಲಾರಸ ಆಧಾರಿತ ಸ್ಕ್ರೀನಿಂಗ್ ಪರೀಕ್ಷೆಯಾದ 'ಈಸಿಕಾವ್'ನ ಉತ್ಪಾದನೆ ಪ್ರಾರಂಭಿಸುವುದಾಗಿ ಫ್ರೆಂಚ್ ಒಕ್ಕೂಟ ಪ್ರಕಟಿಸಿದೆ.
ಲಾಲಾರಸ ಆಧಾರಿತ ಪರೀಕ್ಷೆಯಲ್ಲಿ ಒಂದು ಗಂಟೆಯೊಳಗೆ ಕೊಲೊರಿಮೆಟ್ರಿಕ್ ರೀಡಿಂಗ್ ಮೂಲಕ ವೈರಸ್ ಪತ್ತೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪರೀಕ್ಷೆಯಲ್ಲಿ ವೈದ್ಯಕೀಯ ಸಿಬ್ಬಂದಿ ರೋಗಿಯ ನಾಲಿಗೆಯಿಂದ 1 ಮಿಲಿಗಿಂತ ಕಡಿಮೆ ಲಾಲಾರಸವನ್ನು ಸಂಗ್ರಹಿಸುತ್ತಾರೆ. ನಂತರ ಮಾದರಿಯನ್ನು ಎರಡು ಟ್ಯೂಬ್‌ಗಳಲ್ಲಿ 65 ಡಿಗ್ರಿ ಸೆಲ್ಸಿಯಸ್ ಬಿಸಿ ಮಾಡಲಾಗುತ್ತದೆ. ಕೊಲೊರಿಮೆಟ್ರಿಕ್ ರೀಡಿಂಗ್ ಬಳಿಕ ರೋಗಿಗೆ ಕೊರೊನಾ ವೈರಸ್ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ.
"ಈಸಿಕೋವ್ ಒಂದು ಆವಿಷ್ಕಾರವಾಗಿದ್ದು, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇದು ಪ್ರಮುಖ ಶಕ್ತಿಯಾಗಲಿದೆ" ಎಂದು ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಫ್ರಾಂಕ್ ಮೊಲಿನಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.