ETV Bharat / international

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಹೆಲಿಕಾಪ್ಟರ್,​ ಡ್ರೋಣ್​ ಮೊರೆ ಹೋದ ಫ್ರಾನ್ಸ್​ ಸರ್ಕಾರ

ಕೊರೊನಾ ವಿರುದ್ಧ ಹೋರಾಟ ನಡೆಸಲು ಫ್ರಾನ್ಸ್​ ಸರ್ಕಾರ ಹೆಲಿಕಾಪ್ಟರ್ ಮತ್ತು ಡ್ರೋನ್‌ಗಳನ್ನು ಬಳಕೆ ಮಾಡುತ್ತಿದೆ. ಸ್ವಯಂ ಸೇವಕರು, ಸಿಬ್ಬಂದಿಗೆ ಮಾರ್ಗದರ್ಶನ ನೀಡಲು, ರಿಯಲ್​ ಟೈಮ್​ ತಿಳಿಯಲು ಇದು ಸಹಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.

France to use helicopters, drones to enforce virus restrictions
ಕೊರೊನಾ ವೈರಸ್ ನಿರ್ಬಂಧಗಳನ್ನು ಜಾರಿಗೊಳಿಸಲು ಫ್ರಾನ್ಸ್​ಗೆ ನೆರವಾಗುತ್ತಿವೆ ಡ್ರೋಣ್​, ಹೆಲಿಕಾಪ್ಟರ್
author img

By

Published : Mar 22, 2020, 9:45 AM IST

ಫ್ರಾನ್ಸ್: ವಿಶ್ವದ್ಯಂತ ವ್ಯಾಪಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್​ ದಾಳಿ ವಿರುದ್ಧ ಇಡೀ ಜಗತ್ತು ಯುದ್ಧ ಸಾರಿ ನಿಂತಿದೆ. ಪ್ರತ್ಯೇಕ ದೇಶಗಳು ಕೊರೊನಾ ವೈರಸ್​ ದಾಳಿಯನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ಅನುಸರಿಸುತ್ತಿದೆ. ಇದೇ ನಿಟ್ಟಿನಲ್ಲಿ ಜನರನ್ನು ತಮ್ಮ ಮನೆಗಳಲ್ಲಿ ಇರಿಸುವ ಪ್ರಯತ್ನ ಸರ್ಕಾರದ್ದಾಗಿದೆ. ಈ ಪ್ರಯತ್ನಕ್ಕೆ ಪುಷ್ಟಿ ನೀಡುವ ಸಲುವಾಗಿ ಫ್ರಾನ್ಸ್ ಹೆಲಿಕಾಪ್ಟರ್ ಮತ್ತು ಡ್ರೋನ್‌ಗಳನ್ನು ಬಳಸುತ್ತಿದೆ ಎಂದು ಫ್ರಾನ್ಸ್​​​ ನ​ ಪೊಲೀಸ್ ಅಧಿಕಾರಿ ಶನಿವಾರ ತಿಳಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಸಾರ್ವಜನಿರ ಮೇಲೆ ನಿಗಾ ಇಡಲು ಗಸ್ತು ತಿರುಗುವ ಸ್ವಯಂ ಸೇವಕರು, ಸಿಬ್ಬಂದಿಗೆ ಮಾರ್ಗದರ್ಶನ ಮಾಡಲು ಹಾಗೂ ನೈಜ ಸಮಯದಲ್ಲಿ ವಿಶಾಲವಾದ ದೃಶ್ಯಾವಳಿಗಳನ್ನು ನೀಡುವ ಮೂಲಕ ಇವು ಸಹಕಾರಿಯಾಗಲಿವೆ ಎಂದು ರಾಷ್ಟ್ರೀಯ ಜೆಂಡರ್‌ಮೆರಿ ಮೂಲವೊಂದು ತಿಳಿಸಿದೆ.

ಒಂದು ಹೆಲಿಕಾಪ್ಟರ್ ಈಗಾಗಲೇ ಶನಿವಾದಿಂದ ಬಳಕೆಯಲ್ಲಿದೆ. ಪ್ರಮುಖ ಪ್ಯಾರಿಸ್ ಉದ್ಯಾನವನಗಳ ಮೇಲೆ ಸುತ್ತುವರಿಯುವುದು. ಬಂಧನ ನಿಯಮಗಳನ್ನು ಗೌರವಿಸಿ ಅನುಸರಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು. ಜನರನ್ನು ಸೀಮಿತವಾಗಿಡಲೂ ಡ್ರೋನ್‌ಗಳು ಸಹಾಯ ಮಾಡುತ್ತವೆ.

ಫ್ರಾನ್ಸ್​ನಲ್ಲಿ 9,000ಕ್ಕೂ ಹೆಚ್ಚು ಮಂದಿ ವೈರಸ್ ಸೋಂಕಿಗೆ ಒಳಗಾಗಿದ್ದು, 372 ಸಾವುಗಳು ಸಂಭವಿಸಿವೆ. ಈ ಹಿನ್ನಲೆ ಮಂಗಳವಾರ ಮಧ್ಯಾಹ್ನದಿಂದ ಫ್ರಾನ್ಸ್ ಲಾಕ್‌ಡೌನ್‌ನಲ್ಲಿದೆ. ಸಾಂಕ್ರಾಮಿಕ ಕೋವಿಡ್​-19 ತಡೆಗಟ್ಟುವ ಉದ್ದೇಶದಿಂದ ಎಲ್ಲಾ ನಿವಾಸಿಗಳಿಗೆ ವಿಧಿಸಲಾದ ಎರಡು ವಾರಗಳ ಗೃಹಬಂಧನವನ್ನು ವಿಸ್ತರಿಸಲು ಸರ್ಕಾರವು ಮುಂದಾಗಿದೆ. ಮನೆಯಿಂದ ಹೊರಬಂದು ವಿಹಾರ, ಖರೀದಿ, ವೈದ್ಯರ ಭೇಟಿ, ಅವರಿವರ ಮನೆಗಳಿ ಭೇಟಿ ಎಲ್ಲವೂ ಒಂದು ಮಟ್ಟಿಗೆ ಸೀಮಿತವಾಗಿವೆ. ಸದ್ಯ ಯಾವುದೇ ಕೂಟಗಳನ್ನು ಅನುಮತಿಸಲಾಗುವುದಿಲ್ಲ ಮತ್ತು ಕೆಲಸಗಾರರು ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಇಲ್ಲದಿದ್ದ ಪಕ್ಷದಲ್ಲಿ ಮಾತ್ರ ಕಚೇರಿಗೆ ಹೋಗಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.