ETV Bharat / international

24 ಗಂಟೆಗಳಲ್ಲಿ 23000 ಜನರಿಗೆ ಕೊರೊನಾ ಸೋಂಕು - ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ

ಫ್ರಾನ್ಸ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 23,302 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ವರದಿಯಾಗಿದೆ.

France registers over 23,000 Covid cases in one day
23000 ಜನರಿಗೆ ಕೊರೊನಾ ಸೋಂಕು
author img

By

Published : Mar 10, 2021, 6:44 AM IST

ಪ್ಯಾರಿಸ್​(ಫ್ರಾನ್ಸ್​​): ಕಳೆದ 24 ಗಂಟೆಗಳಲ್ಲಿ ಫ್ರಾನ್ಸ್​ನಲ್ಲಿ 23,302 ಜನರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ, ಇದು ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡ ಹೇರಿದೆ.

ಫ್ರಾನ್ಸ್ ದೇಶವು ಅಮೆರಿಕ, ಭಾರತ, ಬ್ರೆಜಿಲ್, ರಷ್ಯಾ ಮತ್ತು ಯುಕೆ ನಂತರದಲ್ಲಿ ಅತೀ ಹೆಚ್ಚು ಕೊರೊನಾ ಕೇಸ್​ಗಳು ಪತ್ತೆಯಾಗಿರುವ ವಿಶ್ವದ ಆರನೇ ರಾಷ್ಟ್ರವಾಗಿದೆ ಎಂದು ಸರ್ಕಾರದ ವೆಬ್​ಸೈಟ್​ವೊಂದು ವರದಿ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಇನ್ನೂ ಆರು ಜನರು ಆಸ್ಪತ್ರೆಗೆ ದಾಖಲಾಗಿದ್ದು ಒಟ್ಟು ಸಕ್ರಿಯ​ ಕೇಸ್​ಗಳ ಸಂಖ್ಯೆ 25,201ಕ್ಕೆ ತಲುಪಿದ್ದರೆ, 3,918 ರೋಗಿಗಳು ತೀವ್ರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟು 89,301 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್​ ವ್ಯಾಕ್ಸಿನೇಷನ್​ ಆರಂಭಿಸಿರುವ ಫ್ರಾನ್ಸ್​ನಲ್ಲಿ ಇಲ್ಲಿವರೆಗೆ 3,996,329 ಜನರಿಗೆ ಮೊದಲ ಕೋವಿಡ್​ ವ್ಯಾಕ್ಸಿನ್​ ಡೋಸ್​ ನೀಡಲಾಗಿದೆ. ​ವಯಸ್ಸಾದವರು, ಹೆಚ್ಚು ದುರ್ಬಲ ಜನರು ಮತ್ತು ಮುಂಚೂಣಿಯ ವೈದ್ಯಕೀಯ ಸಿಬ್ಬಂದಿಗೆ ಮೊದಲು ಲಸಿಕೆ ನೀಡುವತ್ತ ಫ್ರಾನ್ಸ್​ ಗಮನ ಹರಿಸಿದೆ.

ಇದನ್ನೂ ಓದಿ:ರೈಲಿನಡಿ ಸಿಲುಕಿದ ಬಾಲಕಿ: ಪೊಲೀಸ್​ ಸಮಯ ಪ್ರಜ್ಞೆಯಿಂದ ಬದುಕಿತು ಜೀವ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.