ಪ್ಯಾರಿಸ್ (ಫ್ರಾನ್ಸ್) : ತನ್ನ ಹಾಗೂ ಸಚಿವ ಸಂಪುಟದ ಪ್ರಮುಖ 20 ಸದಸ್ಯರು ಮತ್ತು ಪ್ರಧಾನಿಗಳ ಫೋನ್ ನಂಬರ್ ಪೆಗಾಸಸ್ ಸಾಫ್ಟ್ವೇರ್ನ ಸೋರಿಕೆಯಾದ ಡೇಟಾದಲ್ಲಿ ಕಂಡು ಬಂದ ಹಿನ್ನೆಲೆ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ವಿವಿಧ ಆಯಾಮಗಳಲ್ಲಿ ತನಿಖೆಗೆ ಆದೇಶಿಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಪೆಗಾಸಸ್ ಮಾಹಿತಿ ಸೋರಿಕೆ ಬಗ್ಗೆ ಗಮನಕ್ಕೆ ಬಂದ ಬಳಿಕ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ಎಲಿಸೀ (ಫ್ರೆಂಚ್ ಅಧ್ಯಕ್ಷರ ಅಧಿಕೃತ ನಿವಾಸ) ಆದೇಶಿಸಿದೆ ಎಂದು ಫ್ರೆಂಚ್ ಪ್ರಧಾನಮಂತ್ರಿ ಜೀನ್ ಕ್ಯಾಸ್ಟೆಕ್ಸ್ ತಿಳಿಸಿದ್ದಾರೆ.
ಏನಾಗಿದೆ ಎಂಬುವುದು ಸರಿಯಾಗಿ ಗೊತ್ತಾಗುವ ಮೊದಲೇ ಹೊಸ ಭದ್ರತಾ ಕ್ರಮಗಳು ಮತ್ತು ಇತರ ಕ್ರಮಗಳು ತೆಗೆದುಕೊಳ್ಳಲು ಆಗುವುದಿಲ್ಲ. ನಾವು ಈ ವಿಷಯವನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ ಎಂದು ಕ್ಯಾಸ್ಟೆಕ್ಸ್ ಹೇಳಿದ್ದಾರೆ.
ಓದಿ : Pegasus ಸಾಫ್ಟವೇರ್ಗಾಗಿ 300 ಮಿಲಿಯನ್ ಡಾಲರ್ ಖರ್ಚು ಮಾಡಿತ್ತಂತೆ ಈ ಸರ್ಕಾರ
ಅಧ್ಯಕ್ಷ ಮ್ಯಾಕ್ರೋನ್, ಮಾಜಿ ಪ್ರಧಾನಿ ಎಡ್ವರ್ಡ್ ಫಿಲಿಪ್ ಮತ್ತು 14 ಸಂಪುಟ ಸದಸ್ಯರ ಮೊಬೈಲ್ ನಂಬರ್ಗಳು ಕಾನೂನು ಮತ್ತು ವಿದೇಶಾಂಗ ಇಲಾಖೆಯ ವ್ಯವಹಾರಗಳ ಮಾಹಿತಿ ಪೆಗಾಸಸ್ನ ಸೋರಿಕೆಯಾದ ಬಗ್ಗೆ ಫ್ರೆಂಚ್ ರಾಜಕಾರಣಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪೆಗಾಸಸ್ ಪ್ರಾಜೆಕ್ಟ್ ತನಿಖೆಯಿಂದ ಕೈಗೊಂಡ ವಿಧಿವಿಜ್ಞಾನ ವಿಶ್ಲೇಷಣೆಯ ಪ್ರಕಾರ, ಮಾಜಿ ಪರಿಸರ ಸಚಿವ ಫ್ರಾಂಕೋಯಿಸ್ ಡಿ ರೂಗಿ ಅವರ ಮೊಬೈಲ್ ನಂಬರ್ ಎನ್ಎಸ್ಒ ಗ್ರೂಪ್ನ ಸ್ಪೈವೇರ್ಗೆ ಸಂಬಂಧಿಸಿದ ಚಟುವಟಿಕೆಯ ಡಿಜಿಟಲ್ ಟ್ರೇಸ್ನಲ್ಲಿ ತೋರಿಸಿದೆ. ಮೊರಾಕೋ ದೇಶದ ಮೂಲಗಳು ಅಧ್ಯಕ್ಷ ಮ್ಯಾಕ್ರೋನ್ ಮತ್ತು ಅವರ ತಂಡದ ಬಗ್ಗೆ ಮಾಹಿತಿ ಕದ್ದಿರುವ ಸಾಧ್ಯತೆಯಿದೆ. ಫ್ರಾನ್ಸ್‌ನ ನಿಕಟ ರಾಜತಾಂತ್ರಿಕರೊಬ್ಬರು ಮಾಹಿತಿ ಸೋರಿಕೆ ಮಾಡಿರುವ ಆತಂಕವಿದೆ.
ಫ್ರಾನ್ಸ್ ಮತ್ತು ಮೊರಾಕೊ ಅತ್ಯಂತ ನಿಕಟ ರಾಜತಾಂತ್ರಿಕ ಸಂಬಂಧವನ್ನು ಹೊಂದಿವೆ. ಅದು ಅಗತ್ಯ ಕೂಡ ಹೌದು ಎಂದು ಡಿ ರೂಗಿ ಹೇಳಿದ್ದಾರೆ. ಆದರೆ ನಿಕಟ ಸಂಬಂಧದ ರಾಷ್ಟ್ರದ ಮೂಲಕ ಮಾಹಿತಿ ಕದ್ದಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.