ಪ್ಯಾರಿಸ್: ಭಾರತ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ, ಸಂವಿಧಾನದ 370 ನೇ ವಿಧಿ ಹಾಗೂ ಆರ್ಟಿಕಲ್ 35 ಅನ್ನು ರದ್ದು ಮಾಡಿ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿದ್ದವು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ನಿರ್ಧಾರ ಪಾಕಿಸ್ತಾನದ ಕಸಿವಿಸಿಗೆ ಕಾರಣವಾಗಿದೆ. ಇದರಿಂದಾಗಿ ಪಾಕಿಸ್ತಾನ ಭಾರತದೊಂದಿಗೆ ವಾಣಿಜ್ಯ ವ್ಯವಹಾರ ಸೇರಿದಂತೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿತ ಮಾಡಿದೆ.
ಇನ್ನೊಂದೆಡೆ ಗಡಿಯಲ್ಲಿ ಯುದ್ಧದ ವಾತಾವರಣವೂ ನಿರ್ಮಾಣವಾಗಿದ್ದು, ಜಮ್ಮು- ಕಾಶ್ಮೀರ ವಿಷಯವನ್ನ ಅಂತಾರಾಷ್ಟ್ರೀಯ ಸಮುದಾಯದೆದುರು ಕೊಂಡೊಯ್ಯುವ ಯತ್ನವನ್ನ ಪಾಕಿಸ್ತಾನ ಮಾಡಿ ಮುಖಭಂಗವನ್ನು ಎದುರಿಸಿದೆ.
ಕಾಶ್ಮೀರ ಸಮಸ್ಯೆ ಇತ್ಯರ್ಥ ಮಾಡಲು ಮಧ್ಯಸ್ಥಿಕೆಗೆ ಸಿದ್ಧ: ಟ್ರಂಪ್ ಪುನರುಚ್ಚಾರ
ಇದೀಗ ಎರಡೂ ರಾಷ್ಟ್ರಗಳ ನಡುವೆ ಉಂಟಾಗಿರುವ ವೈಷಮ್ಯ ಕಡಿಮೆ ಮಾಡಲು ಅಂತಾರಾಷ್ಟ್ರೀಯ ಸಮುದಾಯ ಕಾರ್ಯಪ್ರವೃತ್ತವಾಗಿದೆ. ಇದೀಗ ಫ್ರಾನ್ಸ್ ಸಹ ಈ ಸಂಬಂಧ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಅವರಿಗೆ ಫೋನ್ ಕರೆ ಮಾಡಿ ಮಾತನಾಡಿದ್ದಾರೆ.
-
French Ministry for Europe & Foreign Affairs Spokesperson: French Minister for Europe & Foreign Affairs, Jean-Yves Le Drian, y'day held discussions over phone with his Pakistani counterpart, Shah Mehmood Qureshi. The ministers raised the situation in Jammu and Kashmir.(file pics) pic.twitter.com/SjSpRbZTrX
— ANI (@ANI) August 21, 2019 " class="align-text-top noRightClick twitterSection" data="
">French Ministry for Europe & Foreign Affairs Spokesperson: French Minister for Europe & Foreign Affairs, Jean-Yves Le Drian, y'day held discussions over phone with his Pakistani counterpart, Shah Mehmood Qureshi. The ministers raised the situation in Jammu and Kashmir.(file pics) pic.twitter.com/SjSpRbZTrX
— ANI (@ANI) August 21, 2019French Ministry for Europe & Foreign Affairs Spokesperson: French Minister for Europe & Foreign Affairs, Jean-Yves Le Drian, y'day held discussions over phone with his Pakistani counterpart, Shah Mehmood Qureshi. The ministers raised the situation in Jammu and Kashmir.(file pics) pic.twitter.com/SjSpRbZTrX
— ANI (@ANI) August 21, 2019
ಈ ಬಗ್ಗೆ ಮಾತನಾಡಿರುವ ಯೂರೋಪ್ ವ್ಯವಹಾರಗಳ ಮೇಲಿನ ಫ್ರೆಂಚ್ ವಿದೇಶಾಂಗ ಸಚಿವ ಜೀನ್ ಯೆವೀಸ್ ಲೆ ಡೆರೆನ್, ಎರಡೂ ರಾಷ್ಟ್ರಗಳು ದ್ವಿಪಕ್ಷೀಯ ಸಂಬಂಧಗಳನ್ನು ಮರು ಸ್ಥಾಪಿಸಿ ಶಾಂತಿಯುತವಾಗಿ ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಮೊನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದರು.
ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ: ಅಂತಾರಾಷ್ಟ್ರೀಯ ಕೋರ್ಟ್‌ಗೆ ಪಾಕ್ ಮೊರೆ
ಇದೇ ವೇಳೆ, ಎರಡೂ ರಾಷ್ಟ್ರಗಳ ನಡುವಣ ಸಮಸ್ಯೆ ಬಗೆ ಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಇರುವುದಾಗಿ ಆ ಬಳಿಕ ಹೇಳಿಕೆಯನ್ನೂ ನೀಡಿದ್ದರು. ಈ ಮೊದಲೇ ಭಾರತ ಕಾಶ್ಮೀರ ವಿಷಯದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಭಾರತ ಸ್ಪಷ್ಟವಾಗಿ ನಿರಾಕರಿಸಿದೆ.