ETV Bharat / international

ಕಾಬೂಲ್​ನಲ್ಲಿ ಸುರಕ್ಷಿತ ವಲಯ ರಚಿಸುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್​, ಬ್ರಿಟನ್​ ಪ್ರಸ್ತಾಪ - ಸುರಕ್ಷಿತ ವಲಯ ರಚಿಸುವಂತೆ ಯುಎನ್​ನಲ್ಲಿ ಫ್ರಾನ್ಸ್​, ಬ್ರಿಟನ್ ಮನವಿ

ಕಾಬೂಲ್​ನಲ್ಲಿ ಸುರಕ್ಷಿತ ವಲಯ ರಚಿಸುವ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಫ್ರಾನ್ಸ್​, ಬ್ರಿಟನ್​ ಪ್ರಸ್ತಾಪಿಸಲಿವೆ.

France, Britain
France, Britain
author img

By

Published : Aug 29, 2021, 9:21 PM IST

ಪ್ಯಾರಿಸ್: ಅಫ್ಘಾನಿಸ್ತಾನದ ಭದ್ರತಾ ವ್ಯವಸ್ಥೆ ದಿನದಿಂದ ದಿನಕ್ಕೆ ತೀರ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಬೂಲ್​ನಲ್ಲಿ ಸುರಕ್ಷಿತ ವಲಯ ರಚಿಸುವಂತೆ ಕೋರಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಫ್ರಾನ್ಸ್​ ಮತ್ತು ಬ್ರಿಟನ್​ ಮನವಿ ಮಾಡಲಿವೆ.

ಪ್ರಸ್ತುತ ಇರಾಕ್‌ಗೆ ಭೇಟಿ ನೀಡಿರುವ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಈ ಬಗ್ಗೆ ಮಾತನಾಡಿ, ಕಾಬೂಲ್​ನಲ್ಲಿ ಸುರಕ್ಷಿತ ವಲಯ ರಚಿಸುವ ಕುರಿತಂತೆ ನಾವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಸಾಪ್ತಾಹಿಕ 'ಲೆ ಜರ್ನಲ್ ಡು ಡಿಮಾಂಚೆ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮ್ಯಾಕ್ರನ್, ಈ ಕ್ರಮವು ತಾಲಿಬಾನ್ ಮೇಲೆ ಒತ್ತಡವನ್ನೇರುತ್ತದೆ ಎಂದಿದ್ದಾರೆ. ಮಂಗಳವಾರ, ಅಮೆರಿಕ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡ ಬಳಿಕ ಆಫ್ಘನ್​ನ ಜನತೆ ಸ್ಥಳಾಂತರದ ವಿಚಾರವಾಗಿ ನಾವು ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಮ್ಯಾಕ್ರನ್ ಹೇಳಿದ್ದಾರೆ.

ಇದನ್ನೂ ಓದಿ: ‘ಐಸಿಸ್’​ ಗುರಿಯಾಗಿಸಿ ಅಮೆರಿಕ ಸೇನೆ ದಾಳಿ: ನಾವು ಯಶಸ್ವಿಯಾಗಿದ್ದೇವೆ ಎಂದ ಬಿಲ್ ಅರ್ಬನ್

ಅಫ್ಘಾನಿಸ್ತಾನದಿಂದ ಫ್ರಾನ್ಸ್​ ಈವರೆಗೆ 2,834 ಜನರನ್ನು ಸ್ಥಳಾಂತರಿಸಿದೆ. ಬ್ರಿಟನ್ ಶನಿವಾರ ತನ್ನ ಕಾರ್ಯಾಚರಣೆಯನ್ನು ಕೊನೆಗೊಳಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.