ಪ್ಯಾರಿಸ್: ಮಾಲಿಯ ಅಲ್ ಖೈದಾದ ಉತ್ತರ ಆಫ್ರಿಕಾ ವಿಭಾಗದ ಮಿಲಿಟರಿ ನಾಯಕ ಬಹ್ ಆಗ್ ಮೌಸ್ಸಾನನ್ನು ನಮ್ಮ ದೇಶದ ರಕ್ಷಣಾ ಪಡೆಗಳು ಕೊಂದು ಹಾಕಿವೆ ಎಂದು ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವೆ ಫ್ಲಾರೆನ್ಸ್ ಪಾರ್ಲಿ ಶುಕ್ರವಾರ ಹೇಳಿದ್ದಾರೆ.
"ಸಾಹೇಲ್ನಲ್ಲಿ ಫ್ರಾನ್ಸ್ ತನ್ನ ಪಾಲುದಾರರೊಂದಿಗೆ ಭಯೋತ್ಪಾದನೆ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಇದು ಪ್ರಮುಖ ಯಶಸ್ಸಾಗಿದೆ. ಬಹ್ ಆಗ್ ಮೌಸಾ, ಮಾಲಿಯನ್ ಮತ್ತು ಅಂತಾರಾಷ್ಟ್ರೀಯ ಪಡೆಗಳ ವಿರುದ್ಧ ಹಲವಾರು ದಾಳಿಗಳನ್ನು ಮಾಡಲು ಕಾರಣವಾಗಿದ್ದ" ಎಂದು ಪಾರ್ಲಿ ಹೇಳಿದ್ದಾರೆ.
ಮೌಸಾ ರ‍್ಯಾಲಿ ಫಾರ್ ದಿ ವಿಕ್ಟರಿ ಆಫ್ ಇಸ್ಲಾಂ ಮತ್ತು ಮುಸ್ಲಿಮರ ಮಿಲಿಟರಿ ನಾಯಕನಾಗಿದ್ದ. ಗುಪ್ತಚರ, ಸೇನೆ ಹಾಗೂ ಹೆಲಿಕಾಪ್ಟರ್ಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿ ಕೊಲ್ಲಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. 2014 ರಿಂದ ಸಾಹೇಲ್ ಪ್ರದೇಶದಲ್ಲಿ ನಡೆಯುತ್ತಿದ್ದ ಬಂಡಾಯಗಳನ್ನು ತಡೆಯಲು ಫ್ರಾನ್ಸ್ ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿತ್ತು.