ETV Bharat / international

ಕೊರೊನಾ ಭೀತಿ ಇನ್ನಿಲ್ಲ: ರೋಗಿ ಗುಣಮುಖರಾಗಿ ಮನೆಗೆ ಶಿಫ್ಟ್​

ಕೊರೊನಾ ವೈರಸ್​​ನಿಂದ ಬಳಲುತ್ತಿದ್ದ ​​​​​ ರೋಗಿಯೊಬ್ಬರು ಗುಣಮುಖವಾಗಿದ್ದಾರೆ ಎಂದು ಥಾಯ್ಲೆಂಡ್​​ ಆರೋಗ್ಯ ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

First coronavirus patient
ಕೊರೊನಾ ವೈರಸ್​ ರೋಗಿ
author img

By

Published : Feb 6, 2020, 2:30 PM IST

ಬ್ಯಾಂಕಾಕ್: ಕೊರೊನಾ ವೈರಸ್​​ ಇದ್ದ ವ್ಯಕ್ತಿ ಸಂಪೂರ್ಣವಾಗಿ ಗುಣಮುಖನಾಗಿದ್ದು, ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಮಾಡಲಾಗಿದೆ ಎಂದು ಥಾಯ್ಲೆಂಡ್​​​​​ನಲ್ಲಿ ಆರೋಗ್ಯ ಸಚಿವರು ಹೇಳಿದ್ದಾರೆ.

ಚೀನಾದ ಪ್ರವಾಸಿಗರನ್ನು ಕರೆದೊಯ್ಯುವ 50 ವರ್ಷದ ಟ್ಯಾಕ್ಸಿ ಚಾಲಕ,ಥಾಯ್ಲೆಂಡ್​ನಲ್ಲಿ ಗುಣಮುಖವಾಗಿದ್ದಾರೆ. ಒಟ್ಟಾರೆ ಒಂಬತ್ತು ಜನರಲ್ಲಿ ಈ ರೋಗ ಕಂಡು ಬಂದಿತ್ತು.

ಉಳಿದ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಸದ್ಯದಲ್ಲಿಯೇ ಗುಣಮುಖರಾಗುತ್ತಾರೆ ಎಂದು ಥಾಯ್ಲೆಂಡ್​​ನ ಸಾರ್ವಜನಿಕ ಆರೋಗ್ಯ ಸಚಿವರು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟ್ಯಾಕ್ಸಿ ಚಾಲಕನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲ ಸಂಬಂಧಿಕರು ಮತ್ತು ಜನರು ಸೋಂಕಿಗೆ ಒಳಗಾಗಲಿಲ್ಲ ಎಂದು ದೃಢಪಡಿಸಿದ್ದಾರೆ.

ಈ ನಡುವೆ ಥಾಯ್ಲೆಂಡಿನ 138 ಜನರನ್ನು ಚೀನಾದ ವುಹಾನ್​ ನಗರದಿಂದ ಕರೆತರಲಾಗಿದೆ. ಇವರೆಲ್ಲರೂ ತೀವ್ರ ಜ್ವರದಿಂದ ಬಳಲುತ್ತಿದ್ದರು ಎಂದು ಉಪಸಾರ್ವಜನಿಕ ಆರೋಗ್ಯ ಸಚಿವ ಪಿಟೆಚಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.