ಸ್ಟಾಕ್ಹೋಮ್(ಸ್ವೀಡನ್): ಯುನೈಟೆಡ್ ಕಿಂಗ್ಡಮ್(ಇಂಗ್ಲೆಂಡ್) ಯುರೋಪಿಯನ್ ಯೂನಿಯನ್ನಿಂದ ಹೊರ ಬಂದಿದೆ. ಈ ಮೊದಲು ಬ್ರಿಟನ್ 600 ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಂಡಿತ್ತು. ಆ ಎಲ್ಲ ಒಪ್ಪಂದಗಳ ಅವಧಿ ಈ ವರ್ಷದ ಅಂತ್ಯದಲ್ಲಿ ಮುಕ್ತಾಯವಾಗಲಿದೆ. ಹೀಗಾಗಿ ಈ ಎಲ್ಲ ಒಪ್ಪಂದಗಳನ್ನು ಮತ್ತೊಮ್ಮೆ ಮಾಡಿಕೊಳ್ಳಬೇಕಾದ ತುರ್ತು ಅವಶ್ಯಕತೆ ಯುರೋಪಿಯನ್ ಯೂನಿಯನ್ಗೆ ಇದೆ ಎಂದು ಬ್ರೆಕ್ಸಿಟ್ ಸಮಾಲೋಚಕ ಮೈಕೆಲ್ ಬಾರ್ನಿಯರ್ ಹೇಳಿದ್ದಾರೆ.
ಇಂಗ್ಲೆಂಡ್ ಕಳೆದ 60 ವರ್ಷಗಳಿಂದ ಯೂರೋಪಿನ 28 ರಾಷ್ಟ್ರಗಳನ್ನೊಳಗೊಂಡ ಯೂನಿಯನ್ನ ಸದಸ್ಯ ರಾಷ್ಟ್ರವಾಗಿತ್ತು. ಆದರೆ ಬ್ರಿಟನ್ 2016ರಲ್ಲಿ ಜನಾಭ್ರಿಪಾಯದ ಪ್ರಕಾರ ಯುರೋಪಿಯನ್ ಯೂನಿಯನ್ನಿಂದ ಹೊರ ಬಂದಿತ್ತು.
ಬ್ರಿಟನ್ ಇಯುನಿಂದ ಹೊರಹೊದ ಬಗ್ಗೆ ಮಾತನಾಡಿದ ಬಾರ್ನಿಯರ್, ನಮಗೆ ಈಗಾಗಲೇ ಕಡಿಮೆ ಅವಧಿಯಿದ್ದು, ಅಷ್ಟರೊಳಗೆ ಕೆಲವು ಪ್ರಮುಖ ಒಪ್ಪಂದಗಳನ್ನು ಪುನಃ ಮರು ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ಬ್ರೆಕ್ಸಿಟ್ಗೆ ನೂತನವಾಗಿ ಆದ್ಯತೆ ನೀಡಲು ಬಯಸುವ ಮೂರು ಕ್ಷೇತ್ರಗಳ ಬಗ್ಗೆ ವಿಚಾರ ಪ್ರಸ್ತಾಪಿಸಿದ್ದು, ಮೊದಲನೆಯದಾಗಿ ಹವಾಮಾನ ಸಮಸ್ಯೆಗಳು, ಮಧ್ಯಪ್ರಾಚ್ಯದಲ್ಲಿ ಶಾಂತಿ ಕಾಪಾಡಲು ಹಾಗೂ ಇನ್ನಿತರೆ ವಿಚಾರಗಳಿಗಾಗಿ ಯುರೋಪಿಯನ್ ಯೂನಿಯನ್ ಮತ್ತು ಯುಕೆ ನಿಯಮಿತವಾಗಿ ಭೇಟಿಯಾಗುವ ಸಂಬಂಧ ಒಂದು ನೀತಿ ರಚಿಸುವುದು ಅವಶ್ಯಕವಾಗಿದೆ ಎಂದು ಬಾರ್ನಿಯರ್ ಹೇಳಿದ್ದಾರೆ.
ಎರಡನೆಯದಾಗಿ, ಸೈಬರ್ ಅಪರಾಧ, ಭಯೋತ್ಪಾದನೆ ಹಾಗೂ ವಿದೇಶಿ ಶಕ್ತಿಗಳ ಬೆದರಿಕೆಗಳು ಮತ್ತು ಮುಂತಾದವುಗಳನ್ನು ಎದುರಿಸುವ ಸಲುವಾಗಿ ಭದ್ರತಾ ವಿಷಯಗಳೊಂದಿಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದು.
ಮೂರನೆಯದಾಗಿ, ಇಂಗ್ಲೆಂಡ್ ಮತ್ತು ಯುರೋಪಿಯನ್ ಕಾನೂನಿನ ಹಾಗೂ ಮಾನದಂಡಗಳ ಪ್ರಕಾರ ಮೀನುಗಾರಿಕೆ ಸೇರಿದಂತೆ ಇತರ ವ್ಯಾಪಾರ ಒಪ್ಪಂದಗಳನ್ನು ಒಪ್ಪಿಕೊಳ್ಳುವುದಾಗಿದೆ ಎಂದು ಬಾರ್ನಿಯರ್ ಹೇಳಿದ್ದಾರೆ.