ಮಾಸ್ಕೋ: ರಷ್ಯಾದ ಪೂರ್ವ ಕಮ್ಚಟ್ಕಾ ದ್ಪೀಪದ ಪೂರ್ವ ಕರಾವಳಿಯಲ್ಲಿ ಇಂದು 5.2 ತೀವ್ರತೆಯ ಪ್ರಬಲ ಭೂಕಂಪ(Earthquake in Russia ) ಸಂಭವಿಸಿದೆ ಎಂದು ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್ (ಜಿಎಸ್ ಆರ್‌ಎಎಸ್)ನ ಜಿಯೋಫಿಸಿಕಲ್ ಸಮೀಕ್ಷೆಯ ಪ್ರಾದೇಶಿಕ ಸಂಸ್ಥೆ ಮಾಹಿತಿ ನೀಡಿದೆ.
ಪೆಟ್ರೋಪಾವ್ಲೋಸ್ಕ್ - ಕಮ್ಚಟ್ಕಾ ನಗರದ 175 ಕಿಲೋಮೀಟರ್ ದೂರದಲ್ಲಿ ಕಂಪನದ ಕೇಂದ್ರ ಬಿಂದುವಾಗಿದ್ದು, 40 ಕಿಲೋಮೀಟರ್ ಆಳದಲ್ಲಿದೆ ಎಂದು ಜಿಎಸ್‌ಆರ್‌ಎಎಸ್ ಹೇಳಿದೆ. ಭೂಕಂಪದಿಂದ ಯಾವುದೇ ಹಾನಿ ಅಥವಾ ಸಂತ್ರಸ್ತರ ಬಗ್ಗೆ ಮಾಹಿತಿ ಇಲ್ಲ. ಯಾವುದೇ ಸುನಾಮಿ ಎಚ್ಚರಿಕೆಯನ್ನು ಘೋಷಿಸಲಾಗಿಲ್ಲ.
ಪರ್ಯಾಯ ದ್ವೀಪದ ಪೂರ್ವ ಕರಾವಳಿಯು ಮೂರು ಟೆಕ್ಟೋನಿಕ್ ಪ್ಲೇಟ್‌ಗಳ ಗಡಿಯಲ್ಲಿ ಭೂಕಂಪನದ ವಲಯ ಇದೆ. ಪರ್ಯಾಯ ದ್ವೀಪದ ಪೂರ್ವ ಕರಾವಳಿಯು ಮೂರು ಟೆಕ್ಟೋನಿಕ್ ಪ್ಲೇಟ್‌ಗಳ ಗಡಿಯಲ್ಲಿದ್ದು, ಓಖೋಟಸ್ಕ್, ಪೆಸಿಫಿಕ್ ಹಾಗೂ ಉತ್ತರ ಅಮೆರಿಕದ ಕಡೆಗೆ ಚಲಿಸುತ್ತದೆ. ಈ ಪ್ರದೇಶದಲ್ಲಿ ಭೂಕಂಪನ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಮಧ್ಯ ಅಮೆರಿಕದ ನಿಕರಾಗುವಾ ರಾಷ್ಟ್ರದಲ್ಲಿ ಪ್ರಬಲ ಭೂಕಂಪನ