ETV Bharat / international

ಡ್ರೋನ್ ಮೂಲಕ ಕೊರೊನಾ ಸಂತ್ರಸ್ತರು- ತುರ್ತು ಸೇವೆ ನೀಡುವವರಿಗೆ ಗೌರವ

author img

By

Published : Jun 27, 2020, 7:34 AM IST

ಕೊರೊನಾ ವೈರಸ್ ಸಂತ್ರಸ್ತರಿಗೆ ಮತ್ತು ತುರ್ತು ಸೇವೆ ನೀಡುವವರಿಗೆ ಗೌರವ ಸಲ್ಲಿಸಲು ಡ್ರೋನ್ ಹಾರಾಟ ನಡೆಸಲಾಯಿತು. ಪಾರಿವಾಳ, ಮನೆ ಮತ್ತು ಪೋಷಕರು ಮತ್ತು ಮಕ್ಕಳ ವಾಕಿಂಗ್, ಮತ್ತು ಕೋವಿಡ್-19 ನಿಂದ ತೀವ್ರವಾದ ಹೊಡೆತ ಅನುಭವಿಸಿದ ದೇಶಗಳ ಧ್ವಜಗಳನ್ನು ಡ್ರೋನ್​ಗಳು ರಚಿಸಿದವು.

drone
drone

ಮ್ಯಾಡ್ರಿಡ್ (ಸ್ಪೇನ್): ಕೊರೊನಾ ವೈರಸ್ ಸಂತ್ರಸ್ತರಿಗೆ ಮತ್ತು ತುರ್ತು ಸೇವೆ ನೀಡುವವರಿಗೆ ಗೌರವ ಸಲ್ಲಿಸಲು ವಿನ್ಯಾಸಗೊಳಿಸಲಾದ ವಿಶೇಷ ಪ್ರದರ್ಶನದ ಭಾಗವಾಗಿ 40 ಡ್ರೋನ್‌ಗಳು ರಾತ್ರಿ ಹೊತ್ತಿನಲ್ಲಿ ಮ್ಯಾಡ್ರಿಡ್ ಆಕಾಶವನ್ನು ಬೆಳಗಿಸಿವೆ.

ಡ್ರೋನ್‌ಗಳು 10 ನಿಮಿಷಗಳ ಅವಧಿಯಲ್ಲಿ ಪಾರಿವಾಳ, ಮನೆ ಮತ್ತು ಪೋಷಕರು ಮತ್ತು ಮಕ್ಕಳ ವಾಕಿಂಗ್, ಮತ್ತು ಕೋವಿಡ್-19ನಿಂದ ತೀವ್ರವಾದ ಹೊಡೆತ ಅನುಭವಿಸಿದ ದೇಶಗಳ ಧ್ವಜಗಳನ್ನು ರಚಿಸಿ, ಆಕಾಶದಲ್ಲಿ ಚಿತ್ತಾರ ಮೂಡಿಸಿ ಗಮನ ಸೆಳೆದವು.

ಡ್ರೋನ್ ಹಾರಾಟ

ಎಲ್ಇಡಿಗಳು ಮತ್ತು ಸಾಫ್ಟ್‌ವೇರ್ ಬಳಸಿ, 'ಹೋಪ್' ಮತ್ತು 'ಹೀರೋಸ್' ಸೇರಿದಂತೆ ಕೆಲ ಸಂದೇಶಗಳನ್ನು ಕೂಡಾ ನೀಡಲಾಗಿದೆ.

ಜನಸಂದಣಿ ತಪ್ಪಿಸಲು ಮತ್ತು ಸಾಮಾಜಿಕ ಅಂತರ ಕಾಪಾಡಲು ಪ್ರದರ್ಶನದ ನಿಖರವಾದ ಸ್ಥಳವನ್ನು ರಹಸ್ಯವಾಗಿಡಲಾಗಿತ್ತು. ಈ ಡ್ರೋನ್ ಹಾರಾಟವನ್ನು ಯುಎಂಐಎಲ್ಎಸ್ ಎಂಟರ್ಟೈನ್ಮೆಂಟ್ ಗ್ರೂಪ್ ಮತ್ತು ಮ್ಯಾಡ್ರಿಡ್ ಸಿಟಿ ಹಾಲ್ ಆಯೋಜಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.