ETV Bharat / international

ಮುಂದುವರಿದ ರಷ್ಯಾ- ಉಕ್ರೇನ್​ ಯುದ್ಧ: ನಾಗರಿಕರ ಮೇಲೆ ರಷ್ಯಾ ಪೈಶಾಚಿಕ ದಾಳಿ, ವ್ಯಕ್ತಿ ಕೊಂದ ದೃಶ್ಯ ಡ್ರೋನ್​​ನಲ್ಲಿ ಸೆರೆ - ನಾಗರಿಕರನ್ನು ಕೊಲ್ಲುವ ದೃಶ್ಯ ದ್ರೋಣ್​ ಕ್ಯಾಮೆರಾದಲ್ಲಿ ಸೆರೆ

ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ಸಾಗುತ್ತಲೇ ಇದೆ. ಎರಡು ದೇಶಗಳ ಮಧ್ಯೆ ನಾಲ್ಕೈದು ಸುತ್ತಿನ ಮಾತುಕತೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ, ನಾಗರಿಕರ ಮೇಲೆ ರಷ್ಯಾ ಪೈಶಾಚಿಕ ದಾಳಿಯ ದೃಶ್ಯವನ್ನು ಇಲ್ಲಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಬಯಲಿಗೆಳೆದಿದ್ದಾರೆ.

Russian soldiers shooting civilian with his hands up, Drone footage appears to show civilian killing, Russia and Ukraine war, ರಷ್ಯಾದ ಸೈನಿಕರು ನಾಗರಿಕರ ಮೇಲೆ ಗುಂಡಿನ ದಾಳಿ, ನಾಗರಿಕರನ್ನು ಕೊಲ್ಲುವ ದೃಶ್ಯ ದ್ರೋಣ್​ ಕ್ಯಾಮೆರಾದಲ್ಲಿ ಸೆರೆ, ರಷ್ಯಾ ಮತ್ತು ಉಕ್ರೇನ್ ಯುದ್ಧ
ನಾಗರಿಕರ ಮೇಲೆ ರಷ್ಯಾ ಸೈನಿಕರ ದಾಳಿ
author img

By

Published : Mar 17, 2022, 7:40 AM IST

Updated : Mar 17, 2022, 8:15 AM IST

ಕೀವ್​( ಉಕ್ರೇನ್​): ಇತ್ತೀಚೆಗೆ ನಡೆದ ಘಟನೆಯಲ್ಲಿ ರಷ್ಯಾ ಸೈನಿಕರು ಅಮಾಯಕರ ಮೇಲೆ ದಾಳಿ ಮಾಡಿರುವ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಶರಣಾಗತಿಯಾಗಲು ಬಂದ ಕಾರಿನ ಚಾಲಕನ ಮೇಲೆ ರಷ್ಯಾ ಸೈನಿಕರು ಗುಂಡಿನ ದಾಳಿ ನಡೆಸಿರುವ ವಿಡಿಯೋ ಈಗ ಸಂಚಲನ ಸೃಷ್ಟಿಸಿದೆ.

  • #Putin spricht von einer Spezialaktion in der #Ukraine, die sich nicht gegen Zivilisten richte. Eine Drohne filmte allerdings wenige Kilometer westlich von Kiew, wie ein Zivilist von offenbar russischen Soldaten erschossen wird. #ZDFfrontal exklusiv, mehr zum Krieg 21.15 Uhr @ZDF pic.twitter.com/1FDdD7v9Ww

    — frontal (@ZDFfrontal) March 15, 2022 " class="align-text-top noRightClick twitterSection" data=" ">

ರಾಜಧಾನಿ ಕೀವ್‌ನ ಹೃದಯಭಾಗಕ್ಕೆ ಹೋಗುವ ಹೆದ್ದಾರಿ ಅಂಚಿನಲ್ಲಿ ಯುದ್ಧ ಟ್ಯಾಂಕರ್​ವೊಂದು​ ನಿಂತಿದೆ. ಸಿಲ್ವರ್​​​ ಬಣ್ಣದ ಕಾರೊಂದು ಕೀವ್​ನ ಹೃದಯ ಭಾಗಕ್ಕೆ ತೆರಳುತ್ತಿತ್ತು. ಈ ವೇಳೆ ಯುದ್ಧದ ಟ್ಯಾಂಕರ್ ನೋಡಿದ ಚಾಲಕ ಯೂ-ಟರ್ನ್​ ಹೊಡೆದು ವಾಪಸ್ಸಾಗಲು ನಿರ್ಧರಿಸಿದ್ದಾನೆ.

ಓದಿ: ಬಲವಂತದ ಬಂದ್​ ಆಚರಣೆ ಸರಿಯಲ್ಲ - ರಸ್ತೆಗಿಳಿದರೆ ಕಾನೂನು ಕ್ರಮ: ಕಮಲ್ ಪಂತ್ ಎಚ್ಚರಿಕೆ!

ವಾಪಸ್ಸಾಗುತ್ತಿದ್ದ ಕಾರನ್ನು ರಷ್ಯಾ ಸೈನಿಕರು ಅಡ್ಡಗಟ್ಟಿದ್ದಾರೆ. ಈ ವೇಳೆ, ಚಾಲಕ ಕಾರಿನಿಂದ ಹೊರ ಬಂದು ಶರಣಾಗಲು ಕೈಗಳನ್ನು ಮೇಲಕ್ಕೇತ್ತಿದ್ದಾನೆ. ಅಷ್ಟರಲ್ಲಿ ಆ ಚಾಲಕ ಮೇಲೆ ರಷ್ಯಾ ಸೈನಿಕರು ಗುಂಡು ಹಾರಿಸಿ ಕೊಂದಿದ್ದಾರೆ.

ಇನ್ನು ಆ ಕಾರಿನಲ್ಲಿ ಮಗುವಿನೊಂದಿಗೆ ಮಹಿಳೆ ಸಹ ಪ್ರಯಾಣಿಸುತ್ತಿದ್ದರು. ಅವರನ್ನು ವಶಕ್ಕೆ ಪಡೆದ ರಷ್ಯಾ ಸೈನಿಕರು ಕಾಡಿನ ಕಡೆ ಕರೆದುಕೊಂಡು ಹೋದರು ಎಂಬುದು ಜರ್ಮನ್ ಬ್ರಾಡ್‌ಕಾಸ್ಟರ್ ZDF ವರದಿಗಾರರೊಬ್ಬರ ಡ್ರೋನ್​​ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ಈ ವಿಡಿಯೋ ತುಣಕನ್ನು ಬುಗಾಟ್ಟಿ ಕಂಪನಿಯ ಸ್ವಯಂಸೇವಕ ಗುಂಪಿನ ಸದಸ್ಯರಾದ ಡ್ರೋನ್ ಆಪರೇಟರ್ ಝನೋಜಾ ಪಡೆದು ಘಟನೆಯ ಬಗ್ಗೆ ಬಯಲಿಗೆಳಿದಿದ್ದಾರೆ. ಯುದ್ಧಾಪರಾಧಗಳ ಗಂಭೀರ ಆರೋಪಗಳ ಹೊರತಾಗಿಯೂ ರಷ್ಯಾ ತನ್ನ "ವಿಶೇಷ ಸೇನಾ ಕಾರ್ಯಾಚರಣೆ" ಸೈನಿಕರ ಮೇಲೆಯೇ ಹೊರತು ನಾಗರಿಕರ ಮೇಲಲ್ಲ ಎಂದು ಸ್ಪಷ್ಟಪಡಿಸುತ್ತಲೇ ಇದೆ. ಆದರೆ ಪರಿಸ್ಥಿತಿ ಮಾತ್ರ ಬೇರೆಯೇ ಇದೆ ಎಂಬುದು ಡ್ರೋಣ್ ವಿಡಿಯೋಗಳು ಹೇಳುತ್ತಿವೆ.

Last Updated : Mar 17, 2022, 8:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.