ನ್ಯೂಯಾರ್ಕ್(ಅಮೆರಿಕ): ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧದ ವಿಚಾರವಾಗಿ ಹಲವಾರು ಮಾತುಕತೆಗಳು ಈಗಾಗಲೇ ನಡೆದಿವೆ. ಕದನ ವಿರಾಮ ಮತ್ತು ಅಲ್ಲಿನ ನಾಗರಿಕರ ಸ್ಥಳಾಂತರ ಕುರಿತಂತೆಯೂ ಚರ್ಚೆ ನಡೆಸಲಾಗಿದ್ದು, ಒಮ್ಮತಕ್ಕೆ ಬರಲು ಉಭಯ ರಾಷ್ಟ್ರಗಳು ವಿಫಲವಾಗಿವೆ. ಈ ಬೆನ್ನಲ್ಲೇ ನಾಗರಿಕರ ಸ್ಥಳಾಂತರದ ಬಗ್ಗೆ ಭಾರತ ದನಿಯೆತ್ತಿದೆ.
ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿಯಾದ ಟಿ.ಎಸ್.ತಿರುಮೂರ್ತಿ ಭದ್ರತಾ ಮಂಡಳಿಯಲ್ಲಿ ಮಾತನಾಡಿ, ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರೂ ಸೇರಿದಂತೆ ಅಮಾಯಕರ ಸುರಕ್ಷಿತ ಸ್ಥಳಾಂತರವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಎರಡೂ ರಾಷ್ಟ್ರಗಳನ್ನು ನಾವು ಈ ಕುರಿತು ಈಗಾಗಲೇ ಒತ್ತಾಯಿಸಿದ್ದೇವೆ. ಆದರೆ, ಭಾರತದ ನಾಗರಿಕರ ಮತ್ತು ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಸುರಕ್ಷಿತ ಕಾರಿಡಾರ್ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಟಿ.ಎಸ್.ತಿರುಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಮಿ ನಗರದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಸಾಕಷ್ಟು ಮಂದಿ ಇನ್ನೂ ಅಲ್ಲಿಯೇ ಇದ್ದಾರೆ. ಉಕ್ರೇನ್‌ನಿಂದ 20,000ಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ ಎಂದು ಟಿ.ಎಸ್.ತಿರುಮೂರ್ತಿ ಭದ್ರತಾ ಮಂಡಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯುದ್ಧದ ವೇಳೆ ಚರ್ಚೆಗೀಡಾದ ನ್ಯೂಯಾರ್ಕ್ ಟೈಮ್ಸ್ನ ಮುಖಪುಟ ಫೋಟೋ