ಹೆಲ್ಸಿಂಕಿ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣಕಾರಿ ದಾಳಿ ನಡೆಸುತ್ತಿರುವುದರಿಂದ ಇತರ ಸಣ್ಣ ದೇಶಗಳಲ್ಲಿ ಅಭದ್ರತೆ ಕಾಡಲಾರಂಭಿಸಿದೆ. ಯುರೋಪ್ ಒಕ್ಕೂಟದ ರಕ್ಷಣಾ ಗುಂಪಿಗೆ ಸೇರಿಕೊಳ್ಳಬೇಕೆ..? 30 ವರ್ಷಗಳ ಹಳೆಯದಾದ ನಾರ್ಡಿಕ್ ದೇಶಗಳ ಒಕ್ಕೂಟದ ಸಾಮಾನ್ಯ ಭದ್ರತೆಯಿಂದ ಹೊರಗುಳಿಯುವುದನ್ನ ರದ್ದುಗೊಳಿಸಬೇಕೇ ಎಂಬುದರ ಕುರಿತು ಡೆನ್ಮಾರ್ಕ್ ಜನಾಭಿಪ್ರಾಯಕ್ಕೆ ಮುಂದಾಗಿದೆ.
ಡೆನ್ಮಾರ್ಕ್ ಯುದ್ಧದ ಭೀತಿಯಿಂದ ರಕ್ಷಣಾ ನೀತಿಗಳ ಪರಿಷ್ಕರಣೆಗೆ ಮುಂದಾಗಿದ್ದು, ಜೂನ್‌ನಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಸಲಿದೆ. ಐತಿಹಾಸಿಕ ಸಮಯ ಐತಿಹಾಸಿಕ ನಿರ್ಧಾರಗಳಿಗೆ ಕರೆ ನೀಡುತ್ತದೆ ಎಂದು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ನಿನ್ನೆಯಷ್ಟೇ ಹೇಳಿಕೆ ನೀಡಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೊಸ ಸಮಯ, ಹೊಸ ವಾಸ್ತವಕ್ಕೆ ನಾಂದಿ ಹಾಡಿದ್ದಾರೆ. ಉಕ್ರೇನ್‌ನ ಹೋರಾಟ ಕೇವಲ ಉಕ್ರೇನ್‌ನದ್ದಲ್ಲ. ನಾವು ಯುರೋಪ್‌ನಲ್ಲಿ ಒಟ್ಟಿಗೆ ನಿಲ್ಲುತ್ತೇವೆ ಎಂದು ಕೋಪನ್‌ಹೇಗನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫ್ರೆಡೆರಿಕ್ಸೆನ್ ಹೇಳಿದ್ದಾರೆ.
ಯುರೋಪಿಯನ್ ಒಕ್ಕೂಟದ ಸಾಮಾನ್ಯ ಭದ್ರತೆ ಮತ್ತು ರಕ್ಷಣಾ ನೀತಿ ಅಥವಾ ಸಿಎಸ್‌ಡಿಪಿಗೆ ಸೇರುವ ಬಗ್ಗೆ ಜೂನ್ 1 ರಂದು ಜನಾಭಿಪ್ರಾಯ ಸಂಗ್ರಹಣೆ ನಡೆಯಲಿದೆ. ಉಕ್ರೇನ್ ವಿಭಿನ್ನವಾಗಿದೆ. ಸ್ವತಂತ್ರ, ಪ್ರಜಾಪ್ರಭುತ್ವ ದೇಶವು ರಷ್ಯಾದಿಂದ ದಾಳಿಗೆ ಒಳಗಾಗುತ್ತಿದೆ. ತನ್ನ ಸರ್ಕಾರದಲ್ಲಿ ಪ್ರತಿನಿಧಿಸುವ ಪಕ್ಷಗಳು ಜನಾಭಿಪ್ರಾಯ ಸಂಗ್ರಹಣೆ ಮತ್ತು ಸಂಬಂಧಿತ ಕ್ರಮಗಳನ್ನು ಬೆಂಬಲಿಸುತ್ತವೆ ಎಂದಿದ್ದಾರೆ.
2033 ರ ವೇಳೆಗೆ ಒಟ್ಟು ದೇಶೀಯ ಉತ್ಪನ್ನದ ಶೇ.2 ರಷ್ಟು ನ್ಯಾಟೋ ಗುರಿಯನ್ನು ಪೂರೈಸಲು ಡೆನ್ಮಾರ್ಕ್ ಸೇನಾ ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ಇದೇ ವೇಳೆ ಮೆಟ್ಟೆ ಫ್ರೆಡೆರಿಕ್ಸೆನ್ ವಿವರಿಸಿದ್ದಾರೆ.
ಇದನ್ನೂ ಓದಿ: Russia - Ukraine War: ಮುಂದುವರಿದ ರಷ್ಯಾ- ಉಕ್ರೇನ್ ಕದನ.. ರಷ್ಯಾಕ್ಕೆ ಆರ್ಥಿಕ ಹೊಡೆತ!