ಜಿನೀವಾ (ಸ್ವಿಟ್ಜರ್ಲೆಂಡ್): ಚೀನಾದಲ್ಲಿ ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿರುವ ಮಾರಣಾಂತಿಕ ಕೊರೊನಾ ವೈರಸ್ಗೆ ವಿಶ್ವ ಆಗೋಗ್ಯ ಸಂಸ್ಥೆಯು 'ಕೋವಿಡ್ -19' (COVID-19) ಎಂದು ಅಧಿಕೃತ ಹೆಸರಿಟ್ಟಿದೆ.
2019 ರ ಡಿಸೆಂಬರ್ನಲ್ಲಿ ಪ್ರಾರಂಭವಾದ ಕೊರೊನಾ ವೈರಸ್ ಕಾಯಿಲೆ ಎಂಬುದನ್ನು ಸೂಚಿಸಲು 'ಕೋವಿಡ್ -19' ಎಂದು ಹೆಸರಿಡಲಾಗಿದೆ. ( 'Covid-19: coronavirus disease starting in 2019) ಇಲ್ಲಿ CO ಎಂದರೆ ಕೊರೊನಾ, VI ಎಂದರೆ ವೈರಸ್, D ಎಂದರೆ ಡಿಸೀಸ್ ಹಾಗೂ 19 ಎಂದರೆ 2019 ಎಂದು ಅರ್ಥ.
WHO, OIE ಅನಿಮಲ್ ಹೆಲ್ತ್ ಹಾಗೂ FAO ನಡುವಿನ ಒಪ್ಪಂದದ ಮಾರ್ಗಸೂಚಿಗಳ ಪ್ರಕಾರ ನಾವು ಯಾವುದೇ ಭೌಗೋಳಿಕ ಸ್ಥಳ, ಪ್ರಾಣಿ, ಒಬ್ಬ ವ್ಯಕ್ತಿ ಅಥವಾ ಜನರ ಗುಂಪನ್ನು ಉಲ್ಲೇಖಿಸದ ರೀತಿಯಲ್ಲಿ ಹೆಸರನ್ನು ಕಂಡುಹಿಡಿಯಬೇಕಾಗಿತ್ತು. 'ಕೋವಿಡ್ -19' ಎನ್ನುವ ಹೆಸರು ಕಾಯಿಲೆಗೆ ಸಂಬಂಧಪಟ್ಟಿದ್ದಲ್ಲದೇ ಇದನ್ನು ಉಚ್ಚರಿಸಬಹುದಾಗಿದೆ ಎಂದು ಜಿನೀವಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.