ಕೀವ್(ಉಕ್ರೇನ್): ಕಳೆದ ಎಂಟು ದಿನಗಳಿಂದ ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ರಾಜಧಾನಿ ಕೀವ್, ಎರಡನೇ ಅತಿದೊಡ್ಡ ನಗರ ಖಾರ್ಕಿವ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ಭಾರಿ ಪ್ರಮಾಣದಲ್ಲಿ ಬಾಂಬ್, ಶೆಲ್ ಸುರಿಮಳೆಯಾಗುತ್ತಿದೆ. ಇದರ ಮಧ್ಯೆ ಯುವ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.

ರಷ್ಯಾದ ಬಾಂಬ್ ದಾಳಿಯ ನಡುವೆಯೂ ಕೂಡ ಉಕ್ರೇನ್ನ ಈ ಜೋಡಿ ಒಡೆಸಾ ನಗರದ ಬಾಂಬ್ ಶೆಲ್ಟರ್ ತಾಣದಲ್ಲಿ ಮದುವೆ ಮಾಡಿಕೊಂಡರು.

ಇದನ್ನೂ ಓದಿ: ದಾಂಪತ್ಯಕ್ಕಿಂತ ದೇಶ ದೊಡ್ಡದು.. ಮದುವೆಯಾದ ಮರುದಿನವೇ ಗನ್ ಹಿಡಿದು ಉಕ್ರೇನ್ ರಕ್ಷಣೆಗೆ ನಿಂತ ನವಜೋಡಿ!
ಕಳೆದ ಕೆಲವು ದಿನಗಳ ಹಿಂದೆ ಯುದ್ಧಪೀಡಿತ ದೇಶದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಮರುದಿನವೇ ಕೈಯಲ್ಲಿ ಗನ್ ಹಿಡಿದು, ದೇಶ ಸೇವೆಯಲ್ಲಿ ಭಾಗಿಯಾಗಿದ್ದು ವಿಶ್ವದ ಗಮನ ಸೆಳೆದಿತ್ತು.