ETV Bharat / international

ಕೊರೊನಾ ವೈರಸ್​ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ - ಕೊರೊನಾ ವೈರಸ್​ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ

ಕೊರೊನಾ ವೈರಸ್​ ಕಳೆದ ವಾರಕ್ಕಿಂತ ಈ ವಾರ ಹೆಚ್ಚಾಗಿದೆ ಮತ್ತು ಇದು ವಿಶ್ವದ ನಾನಾ ಭಾಗಗಳಿಗೆ ಹಬ್ಬುತ್ತಿದೆ. ಆದ್ದರಿಂದ ವಿಶ್ವದ ರಾಜಕೀಯ ನಾಯಕರು ವೈರಸ್​ಗೆ ಲಸಿಕೆ ಕಂಡು ಹಿಡಿಯಲು ಮತ್ತು ಇತರ ಕಾರ್ಯಗಳಲ್ಲಿ ತಮ್ಮ ಬದ್ದತೆ ಮುಂದುವರೆಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ.

Coronavirus pandemic 'by no means over': WHO
ಕೊರೊನಾ ವೈರಸ್​ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ
author img

By

Published : Jun 11, 2020, 1:24 PM IST

ಜಿನೀವಾ : ಕೊರೊನಾ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ, ವಿಶ್ವದಾದ್ಯಂತ ದೇಶಗಳು ವೈರಸ್ ವಿರುದ್ಧ ಹೋರಾಟ ನಡೆಸುತ್ತಲೇ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮದ ನಿರ್ದೇಶಕ ಮೈಕಲ್ ಜೆ. ರಯಾನ್ , ಕಳೆದ ವಾರಕ್ಕೆ ಹೋಲಿಸಿದರೆ ಕೊರೊನಾ ಪ್ರಕರಣಗಳು ಇನ್ನೂ ಹೆಚ್ಚಾಗಿವೆ. ವಿಶ್ವದ ನಾನಾ ಭಾಗಗಳಲ್ಲಿ ಇದು ಹಬ್ಬುತ್ತಿದೆ. ಈ ಬಗ್ಗೆ ನಮಗೆ ಅತಿಯಾದ ಕಾಳಜಿಯಿದೆ ಎಂದಿದ್ದಾರೆ.

ಡಬ್ಲ್ಯೂಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಪ್ರತಿಕ್ರಿಯಿಸಿ, ಕೊರೊನಾ ವೈರಸ್​ಗೆ ಲಸಿಕೆ ಕಂಡು ಹಿಡಿಯಲು ಸಂಶೋಧನೆಗಳು ಮುಂದುವರೆದಿವೆ. ಈಗ ರೋಗ ಲಕ್ಷಣ ಇರುವ ಜನರನ್ನು ಪತ್ತೆ ಹಚ್ಚುವುದು, ಐಸೋಲೇಷನ್ ಮತ್ತು ಕ್ವಾರಂಟೈನ್ ಮಾಡುವುದು ವೈರಸ್​​ ಹರಡುವುದುನ್ನು ನಿಯಂತ್ರಿಸಲು ನಮಗಿರುವ ನಿರ್ಣಾಯಕ ಮಾರ್ಗಗಳಾಗಿವೆ ಎಂದಿದ್ದಾರೆ. ಅಲ್ಲದೇ, ವಿವಿಧ ರಾಷ್ಟ್ರಗಳ ರಾಜಕೀಯ ನಾಯಕರು ಲಸಿಕೆ ಕಂಡು ಹಿಡಿಯಲು ಮತ್ತು ಇತರ ವಿಷಯಗಳಲ್ಲಿ ತಮ್ಮ ಬದ್ದತೆಯನ್ನು ಮುಂದುವರೆಸಬೇಕೆಂದು ಅವರು ಇದೇ ವೇಳೆ, ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.