ಜಿನೀವಾ : ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ರೋಗದ ಪರೀಕ್ಷೆಯಾಗಿದೆ. ನಾವು ಒಗ್ಗಟ್ಟು, ಪರಸ್ಪರ ಸಹಕಾರ ಭಾವನೆ ಮತ್ತು ಮಾನವೀಯತೆಯಿಂದ ಈ ವೈರಾಣುವಿನ ವಿರುದ್ಧ ಹೋರಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೋವಿಡ್ಗೆ ಚಿಕಿತ್ಸೆಗೆ ನೀಡಲು ಅನುಮತಿ ಪಡೆದಿರುವ ಏಕೈಕ ಔಷಧ 'ರೆಮ್‌ಡೆಸಿವಿರ್'ನ ಸಂಪೂರ್ಣ ಸ್ಟಾಕ್ ಅನ್ನು ಯುಎಸ್ ಖರೀದಿಸಿದೆ ಎಂಬ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಇನ್ನೂ ಮೂರು ತಿಂಗಳವರೆಗೆ ಬೇರೆ ಯಾವುದೇ ದೇಶಗಳು ಈ ಔಷಧಿಯನ್ನು ಖರೀದಿಸಲು ಸಾಧ್ಯವಿಲ್ಲ ಎಂಬುವುದರ ಬಗ್ಗೆಯೂ ಗೊತ್ತಿದೆ ಎಂದು ಡಬ್ಲ್ಯುಹೆಚ್‌ಒ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಬ್ಲ್ಯುಎಚ್‌ಒನ ಆರೋಗ್ಯ ತುರ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮೈಕ್ ರಯಾನ್, ಸಂಪೂರ್ಣ ಔಷಧಗಳನ್ನು ಖರೀದಿಸುವ ಬಗ್ಗೆ ಗಿಲ್ಯಾಡ್ ಸೈನ್ಸಸ್‌ನೊಂದಿಗಿನ ಅಮೆರಿಕದ ಒಪ್ಪಂದ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ, ಇದು ಇತರ ದೇಶಗಳಲ್ಲಿ ರೆಮ್‌ಡೆಸಿವಿರ್ ಉತ್ಪಾದನೆಗೆ ಅನುವು ಮಾಡಿಕೊಡುತ್ತದೆ. ಡಬ್ಲ್ಯುಎಚ್‌ಒ ವಿಶ್ವದ ಜನರ ಜೀವ ಉಳಿಸುವ ಅಗತ್ಯ ವಸ್ತುಗಳ ವಿಷಯದಲ್ಲಿ ಮಧ್ಯ ಪ್ರವೇಶಿಸಲು ಸದಾ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ನಿಂದ ಹೊರ ಬರಲು ಉತ್ತಮ ಮಾರ್ಗವೆಂದರೆ ಸಮಗ್ರ ಔಷಧ ವಿಧಾನವನ್ನು ಅನುಸರಿಸುವುದು. ಸರಿಯಾದ ವಿಧಾನಗಳನ್ನು ಅನುಸರಿದ ದೇಶಗಳು ಮುಂದೆ, ಕಠಿಣವಾದ ಹಾದಿಯನ್ನು ಎದುರಿಸಬೇಕಾಗುತ್ತದೆ ಎಂದು ಡಬ್ಲ್ಯುಹೆಚ್‌ಒ ಮಹಾನಿರ್ದೇಶಕರು ಎಚ್ಚರಿಸಿದ್ದಾರೆ.