ಮಾಸ್ಕೋ: ರಷ್ಯಾದಲ್ಲಿ ಸೆಪ್ಟೆಂಬರ್ 17 ರಿಂದ ಸೆ. 199(ಇಂದಿನವರೆಗೆ) ಮೂರು ದಿನಗಳ ಕಾಲ ಸಂಸತ್ ಚುನಾವಣೆ ನಡೆಯುತ್ತಿದೆ. ಚುನಾವಣೆ ವೇಳೆ ನಿಯಮಗಳು ಉಲ್ಲಂಘನೆಯಾಗುತ್ತಿವೆ ಎಂದು ಕಮ್ಯುನಿಸ್ಟ್ ಪಾರ್ಟಿ ಮುಖ್ಯಸ್ಥ ಗೆನ್ನಡಿ ಜ್ಯುಗಾನೋವ್ ಆರೋಪಿಸಿದ್ದಾರೆ.
ಈ ಚುನಾವಣೆಯಲ್ಲಿ ನಾವು ಅತಿ ಹೆಚ್ಚು ಸ್ಥಾನಗಳನ್ನು ಗಳಿಸುತ್ತೇವೆ ಎಂದು ಗೆನ್ನಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಅಧ್ಯಕ್ಷ ವ್ಲಾಡಿಮರ್ ಪುಟಿನ್, ಮತಗಳನ್ನು ಖರೀದಿ ಮಾಡಿದ್ದಾರೆ. ಚುನಾವಣಾ ಆಯೋಗವು ಮತದಾನ ಕೇಂದ್ರಗಳಲ್ಲಿ ಮತಯಂತ್ರಗಳನ್ನು ಕಾಪಾಡಲು ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪಕ್ಷ ರಷ್ಯಾ ಸಂಸತ್ನ ಕೆಳಮನೆ ಡೂಮಾಕ್ಕೆ ಚುನಾವಣೆ ನಡೆದಿದ್ದು, ಇಲ್ಲಿ ಪುಟಿನ್ ಪ್ರಾಬಲ್ಯ ಸಾಧಿಸಲಿದ್ದಾರೆ. ಆದರೆ, ಅವರು ಅಧ್ಯಕ್ಷರಾಗಲು ಬೇಕಾದ ಮೂರನೇ ಎರಡರಷ್ಟು ಬಹುಮತ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಮಧ್ಯೆ ಕಮ್ಯುನಿಸ್ಟರು ಹೆಚ್ಚು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
ಒಂದು ವೇಳೆ ಅವರಿಗೆ ಬಹುಮತ ದೊರೆತರೂ ಪುಟಿನ್ ಅಧ್ಯಕ್ಷರಾಗಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಈ ಹಿನ್ನೆಲೆ ಈ ಬಾರಿಯೂ 3ನೇ 2 ರಷ್ಟು ಬಹುಮತವನ್ನ ಪಡೆಯಬೇಕಾದ ಅವಶ್ಯಕತೆ ಪುಟಿನ್ ಅವರ ಪಕ್ಷಕ್ಕೆ ಇದೆ.
ಕಮ್ಯುನಿಸ್ಟರು ಸಂಸತ್ತಿನಲ್ಲಿ ಕ್ರೆಮ್ಲಿನ್ ಉಪಕ್ರಮಗಳನ್ನು ಬೆಂಬಲಿಸಿದರೂ, ಯುನೈಟೆಡ್ ರಷ್ಯಾ ಈ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಲಿದೆ. ಅಲೆಕ್ಸಿ ನವಾಲ್ನಿ ಅವರು ಸ್ಮಾರ್ಟ್ ವೋಟಿಂಗ್ ತಂತ್ರಾಂಶವನ್ನು ಬಿಡುಗಡೆಗೊಳಿಸಿದ್ದಾರೆ. ಆದರೆ, ಈ ತಂತ್ರಾಂಶವನ್ನು ಡಿಲೀಟ್ ಮಾಡುವಂತೆ ಗೂಗಲ್ ಮತ್ತು ಆ್ಯಪಲ್ ಕಂಪನಿಗಳಿಗೆ ರಷ್ಯಾ ವಿದೇಶಾಂಗ ಸಚಿವಾಲಯ ಸೂಚಿಸಿದೆ.
ಜ್ಯುಗಾನೋವ್ ಪಕ್ಷವು ಕಳೆದ ಮೂರು ದಿನಗಳಿಂದ 44 ಮತದಾನ ಉಲ್ಲಂಘನೆ ಪ್ರಕರಣಗಳನ್ನು ಲೆಕ್ಕ ಹಾಕಿದೆ. ಈ ಹಿನ್ನೆಲೆ ಇಂದು ಮತದಾನ ಮುಗಿದ ಬಳಿಕ ಪ್ರತಿಭಟನೆ ನಡೆಸಲು ಚುನಾವಣಾ ಆಯೋಗಕ್ಕೆ ಕಮ್ಯುನಿಸ್ಟ್ ಪಕ್ಷ ಅರ್ಜಿ ಸಲ್ಲಿಸಿದೆ.
ಪುಟಿನ್ ಪಕ್ಷಕ್ಕೆ ಮತ ಹಾಕಿದವರಿಗೆ 15 ಡಾಲರ್ ನೀಡುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಗೆ ಮತ ಹಾಕಿದ್ದೇನೆ ಎಂದು ಪುರಾವೆಗಳ ಸಹಿತ ಮೆಸೇಜ್ ಮಾಡಿದರೆ ಹಣ ನೀಡುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.
ಇದನ್ನೂ ಓದಿ: ರಷ್ಯಾ ಚುನಾವಣೆಗೆ ಮತದಾನ ಆರಂಭ: ಮತ್ತೆ ಅಧ್ಯಕ್ಷರಾಗ್ತಾರಾ ಪುಟಿನ್?
ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಚುನಾವಣಾ ಆಯೋಗದ ಸದಸ್ಯರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಒಬ್ಬ ವ್ಯಕ್ತಿ ಹಲವಾರು ಮತಗಳನ್ನು ಚಲಾಯಿಸಲು ಯತ್ನಿಸಿದ್ದಾನೆ. ಈ ವ್ಯಕ್ತಿ ಮತಪತ್ರಗಳನ್ನು ಸಬ್ ವೇ ನಿಲ್ದಾಣದಲ್ಲಿ ಪಡೆದುಕೊಂಡಿದ್ದ ಎಂದು ತಿಳಿದುಬಂದಿದೆ.