ETV Bharat / international

ಇಂಡೋ-ಪೆಸಿಫಿಕ್​ ವಿವಾದ-  ಶೀತಲ ಸಮರಕ್ಕೆ ದೂಡಬೇಡಿ: ಅಮೆರಿಕಕ್ಕೆ ಚೀನಾ ಎಚ್ಚರಿಕೆ - ಚೀನಾ ಶೀತಲ ಸಮರದ ಮನಸ್ಥಿತಿಗೆ ತಲುಪಿರುವುದರ ಬಗ್ಗೆ ಅಮೆರಿಕಕ್ಕೆ ಎಚ್ಚರಿಕೆ

ಚೀನಾ ಶೀತಲ ಸಮರದ ಮನಸ್ಥಿತಿಗೆ ತಲುಪಿರುವುದರ ಬಗ್ಗೆ ಅಮೆರಿಕಕ್ಕೆ ಎಚ್ಚರಿಕೆ ಸಂದೇಶ ನೀಡಿದೆ. ಅಮೆರಿಕ- ಬ್ರಿಟನ್ ಮತ್ತು ಆಸ್ಟ್ರೇಲಿಯಾ ಹೊಸ ಭದ್ರತಾ ಮೈತ್ರಿ ಘೋಷಿಸಿದ ವಾರಗಳ ನಂತರ ಆಸ್ಟ್ರೇಲಿಯಾ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಸನ್ನದ್ಧವಾಗಿರುವುದು ಚೀನಾಕ್ಕೆ ಸರಿ ಕಂಡಿಲ್ಲ. ಹೀಗಾಗಿ ಅದು ಅಮೆರಿಕ - ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನಡುವಣ ಒಪ್ಪಂದವನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕಟುವಾಗಿ ಟೀಕಿಸಿದ್ದಾರೆ

APEC-CHINA
APEC-CHINA
author img

By

Published : Nov 11, 2021, 7:00 AM IST

ವಾಷಿಂಗ್ಟನ್​: ಇಂಡೋ - ಪೆಸಿಫಿಕ್​​ ಮಹಾಸಾಗರದ ಮೇಲೆ ಹಿಡಿತ ಸಾಧಿಸಲು ಅಮೆರಿಕ - ಚೀನಾ ನಡುವೆ ಮಹಾ ಶೀತಲ ಸಮರ ಏರ್ಪಟ್ಟಿದೆ. ಅಮೆರಿಕ ಇಂಗ್ಲೆಂಡ್​ - ಆಸ್ಟ್ರೇಲಿಯಾ ಜತೆಗೂಡಿ ಚೀನಾ ಕಟ್ಟಿ ಹಾಕಲು ಜಂಟಿ ಕಾರ್ಯಾಚರಣೆ ಮಾಡ್ತಿದೆ.

ಅಮೆರಿಕ ಜತೆ ಭಾರತ ಕೈಜೋಡಿಸಿರುವುದರಿಂದ ಚೀನಾ ಕಣ್ಣು ಕೆಂಪಗಾಗಿದೆ. ಇನ್ನು ಅಮೆರಿಕ - ಇಂಗ್ಲೆಂಡ್​ ಹಾಗೂ ಆಸ್ಟ್ರೇಲಿಯಾ ಜತೆಗೂ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚೀನಾ ಶೀತಲ ಸಮರದ ಮನಸ್ಥಿತಿಗೆ ತಲುಪಿರುವುದರ ಬಗ್ಗೆ ಅಮೆರಿಕಕ್ಕೆ ಎಚ್ಚರಿಕೆ ಸಂದೇಶ ನೀಡಿದೆ. ಅಮೆರಿಕ- ಬ್ರಿಟನ್ ಮತ್ತು ಆಸ್ಟ್ರೇಲಿಯಾ ಹೊಸ ಭದ್ರತಾ ಮೈತ್ರಿ ಘೋಷಿಸಿದ ವಾರಗಳ ನಂತರ ಆಸ್ಟ್ರೇಲಿಯಾ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಸನ್ನದ್ಧವಾಗಿರುವುದು ಚೀನಾಕ್ಕೆ ಸರಿ ಕಂಡಿಲ್ಲ. ಹೀಗಾಗಿ ಅದು ಅಮೆರಿಕ - ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನಡುವಣ ಒಪ್ಪಂದವನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕಟುವಾಗಿ ಟೀಕಿಸಿದ್ದಾರೆ.

ನ್ಯೂಜಿಲ್ಯಾಂಡ್​ನಲ್ಲಿ ಆಯೋಜಿಸಿರುವ ಏಷ್ಯಾ ಪೆಸಿಫಿಕ್​​​ ಎಕಾನಮಿಕ್​​ ಕೋ ಆಪರೇಷನ್​ ಫೋರಂ ನ ಸಿಇಒ ಶೃಂಗಸಭೆಗೂ ಮುನ್ನ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಈ ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ, ಶನಿವಾರ ಅವರು ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಇತರ ಪೆಸಿಫಿಕ್ ರಿಮ್ ನಾಯಕರೊಂದಿಗೆ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.

ಏಷ್ಯಾ ಪೆಸಿಫಿಕ್​ ಸಭೆಯಲ್ಲಿ ಮಾತನಾಡಿರುವ ಅವರು, ಸೈದ್ಧಾಂತಿಕ ಅಥವಾ ಭೌಗೋಳಿಕ ರಾಜಕೀಯದ ಮೂಲಕ ಪ್ರದೇಶದಲ್ಲಿ ಗಡಿಗಳನ್ನು ಸೆಳೆಯುವ ಪ್ರಯತ್ನಗಳು ವಿಫಲಗೊಳ್ಳಲಿವೆ ಎನ್ನುವ ಮೂಲಕ ಅಮೆರಿಕದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ, "ಏಷ್ಯಾ-ಪೆಸಿಫಿಕ್ ಪ್ರದೇಶವು ಶೀತಲ ಸಮರ ಯುಗಕ್ಕೆ ಮರಳುವಂತಾಗಬಾರದು ಮತ್ತು ವಿಭಜನೆಗೆ ಅವಕಾಶ ನೀಡಬಾರದು ಎಂದು ಚೀನಾ ಅಧ್ಯಕ್ಷರು ಪ್ರತಿಪಾದಿಸಿದ್ದಾರೆ. ಈ ಭಾಗದ "ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಚೀನಾ ಸುಧಾರಣೆ ತರುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಕ್ಸಿ ಇದೇ ವೇಳೆ ಪುನರುಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.