ಪ್ಯಾರಿಸ್ (ಫ್ರಾನ್ಸ್): ಶತಕೋಟಿ ಡಾಲರ್ ಪರಮಾಣು ತಂತ್ರಜ್ಞಾನ ಪಡೆಯಲು ಪ್ರಯತ್ನಿಸುತ್ತಿರುವ ಚೀನಾ ತನ್ನ ಲಾಬಿ ತೀವ್ರಗೊಳಿಸಿದೆ. ಇದನ್ನು "ಸಾಲ - ಬಲೆ ರಾಜತಾಂತ್ರಿಕತೆ (debt-trap diplomacy)"ಯಲ್ಲಿ ಹೊಸ ಸಾಧನವಾಗಿ ಬಳಸಬಹುದು ಎಂದು ಯುಎಸ್ ಮೂಲದ ಸುದ್ದಿ ಸಂಸ್ಥೆ ದಿ ಕ್ಲಾಕ್ಸನ್ ವರದಿ ಮಾಡಿದೆ.
"ಫ್ರಾಂಕೊ - ಸಿನೋ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ಸೋಗಿನಲ್ಲಿ ಚೀನಾ ಸರ್ಕಾರ ಇತ್ತೀಚೆಗೆ ಪ್ರಮುಖ ಫ್ರೆಂಚ್ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಶತಕೋಟಿ ಡಾಲರ್ ಪರಮಾಣು ತಂತ್ರಜ್ಞಾನ ಪಡೆಯುವ ಉತ್ಸಾಹ ಭರಿತ ಪ್ರಯತ್ನದಿಂದ ಲಾಬಿ ಅಭಿಯಾನವನ್ನು ತೀವ್ರಗೊಳಿಸಿದೆ. ಇದನ್ನು ಚೀನಾ ತನ್ನ ವಿಸ್ತರಣೆಗೆ ಬಳಸುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಚೀನಾ ಮತ್ತು ಫ್ರೆಂಚ್ ಸರ್ಕಾರದ ನಡುವಿನ 10 ಬಿಲಿಯನ್ ಯೂರೋ ಒಪ್ಪಂದ ಪುನರುಜ್ಜೀವನಗೊಳಿಸಲು ಚೀನಾ ಪ್ರಯತ್ನಿಸುತ್ತಿದೆ. ಇದು 2018ರ ಕೊನೆಯಲ್ಲಿ ಸ್ಥಗಿತಗೊಂಡಿತ್ತು.