ನೋಮ್ ಪೆನ್: ಕಾಂಬೋಡಿಯಾ ಪ್ರಧಾನಿ ಹುನ್ಸೇನ್ ಕೋವಿಡ್ ವ್ಯಾಕ್ಸಿನ್ ನೀಡುವಂತೆ ಹೊಸ ಭಾರತೀಯ ರಾಯಭಾರಿ ದೇವಯಾನಿ ಉತ್ತಮ್ಖೋಂಬ್ರಗಡೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮೊದಲು ಚೀನಾ ಕಾಂಬೊಡಿಯಾಗೆ ಒಂದು ಮಿಲಿಯನ್ ಡೋಸ್ ಕೋವಿಡ್ ಲಸಿಕೆ ನೀಡಲು ಮುಂದಾಗಿತ್ತು. ಆದರೆ, ಚೀನಾ ವ್ಯಾಕ್ಸಿನ್ಗೆ WHO ಅನುಮೋದನೆ ನೀಡಲಿಲ್ಲ.
ಜನವರಿ 18 ರ ಹೊತ್ತಿಗೆ, ಕಾಂಬೋಡಿಯಾದಲ್ಲಿ ಒಟ್ಟು 439 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, 53 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜನವರಿ 16 ರಂದು ಭಾರತದಲ್ಲಿ ಕೋವಿಡ್ ವ್ಯಾಕ್ಸಿನೇಷನ್ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಜಗತ್ತಿನ ಅತಿದೊಡ್ಡ ವ್ಯಾಕ್ಸಿನ್ ಡ್ರೈವ್ ಇದಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವರ್ಷದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ದೇಶ ಹೊಂದಿದೆ.