ETV Bharat / international

ಕೊರೊನಾ ಗೆದ್ದ ಬ್ರಿಟನ್ ಪ್ರಧಾನಿ.. ನಾಳೆಯಿಂದ ಕೆಲಸಕ್ಕೆ ಹಾಜರ್! - ಬ್ರಿಟನ್ ಪ್ರಧಾನಿ ಕೆಲಸಕ್ಕೆ ಹಾಜರು

ಕೊರೊನಾ ಸೋಂಕಿಗೆ ಗುರಿಯಾಗಿ ಗುಣಮುಖರಾದ ಬಳಿಕ ಏಪ್ರಿಲ್ 12 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನಾಳೆಯಿಂದ ಕೆಲಸಕ್ಕೆ ಹಾಜರಾಗಲಿದ್ದಾರೆ.

British PM to return to work in Downing Street on Monday
ಕೊರೊನಾ ಗೆದ್ದ ಬ್ರಿಟನ್ ಪ್ರಧಾನಿ
author img

By

Published : Apr 26, 2020, 1:35 PM IST

ಲಂಡನ್: ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಿ ಲಂಡನ್ ಆಸ್ಪತ್ರೆಯಿಂದ ಹೊರಬಂದು ಸುಮಾರು ಎರಡು ವಾರ ಕಳೆದ ನಂತರ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನಾಳೆಯಿಂದ ಕೆಲಸಕ್ಕೆ ಮರಳಲಿದ್ದಾರೆ.

ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಕೆಲಸಕ್ಕೆ ಮರಳುವ ಬಗ್ಗೆ ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ವೈದ್ಯರ ಸಲಹೆಗೆ ಅನುಗುಣವಾಗಿ, ಬೋರಿಸ್ ಜಾನ್ಸನ್ ಸೋಮವಾರ ಲಂಡನ್​ನ ಡೌನಿಂಗ್ ಸ್ಟ್ರೀಟ್​ನಲ್ಲಿ ಸುದ್ದಿಗೋಷ್ಠಿ ಆಯೋಜಿಸಬಹುದು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಲಂಡನ್​ನ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮೂರು ರಾತ್ರಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ನಂತರ ಚೇತರಿಕೆ ಕಂಡು ಸಂಪೂರ್ಣ ಗುಣಮುಖರಾಗಿದ್ದ ಬೋರಿಸ್ ಏಪ್ರಿಲ್ 12ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.