ETV Bharat / international

ಯುಕೆಯಲ್ಲಿ ನಿಲ್ಲದ ಕೊರೊನಾ ಆರ್ಭಟ.. 24 ಗಂಟೆಯಲ್ಲಿ ದಾಖಲೆಯ 93 ಸಾವಿರ ಕೇಸ್ ದಾಖಲು - ಯುಕೆಯಲ್ಲಿ ಕೊರೊನಾ

ಮಹಾಮಾರಿ ಕೊರೊನಾ ವೈರಸ್ ಹಾವಳಿ ಪ್ರಪಂಚದಲ್ಲಿ ಕಡಿಮೆಯಾಗುವ ಯಾವುದೇ ಮುನ್ಸೂಚನೆ ಕಾಣಿಸುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಬ್ರಿಟನ್​ನಲ್ಲಿ ಹೊಸದಾಗಿ ದಾಖಲೆಯ 93 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣಗಳು ದಾಖಲಾಗಿವೆ.

Covid Cases In UK
Covid Cases In UK
author img

By

Published : Dec 17, 2021, 10:48 PM IST

ಲಂಡನ್​: ಒಮಿಕ್ರಾನ್​ ಭೀತಿ ನಡುವೆ ಕೂಡ ಬ್ರಿಟನ್​​​ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗ್ತಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆಯ 93 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣಗಳು ದಾಖಲಾಗಿವೆ.

ನಿನ್ನೆ 88 ಸಾವಿರ ಹೊಸ ಕೋವಿಡ್​​ ಪ್ರಕರಣಗಳು ದಾಖಲಾಗಿದ್ದವು. ಆದರೆ, ಇದು 93 ಸಾವಿರಕ್ಕೂ ಅಧಿಕ ಹೊಸ ಸೋಂಕು ಕಾಣಿಸಿಕೊಂಡಿರುವ ಕಾರಣ ಮೂರನೇ ಅಲೆಯ ಭೀತಿ ಎದುರಾಗಿದೆ. ಸದ್ಯ ಯುಕೆಯಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ 11.1 ಮಿಲಿಯನ್​ಗೂ ಅಧಿಕವಾಗಿದ್ದು, 24 ಗಂಟೆಯಲ್ಲಿ 111 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಸೋಂಕಿನಿಂದ ಇಲ್ಲಿಯವರೆಗೆ 1,47,000 ಜನರು ಸಾವನ್ನಪ್ಪಿದಂತಾಗಿದೆ.

ಇದನ್ನೂ ಓದಿರಿ: ಬ್ರಿಟನ್​​ನಲ್ಲಿ ಒಂದೇ ದಿನ 88,376 ಹೊಸ ಕೋವಿಡ್​ ಕೇಸ್​ ದಾಖಲು

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಲಂಡನ್​​​ ಪ್ರಧಾನಿ ಬೊರಿಸ್​​ ಜಾನ್ಸನ್​, ಸಾಧ್ಯವಾದಷ್ಟು ವೇಗವಾಗಿ ಎಲ್ಲರೂ ವ್ಯಾಕ್ಸಿನೇಷನ್​ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಕೆಲವೊಂದು ಪ್ರದೇಶಗಳಲ್ಲಿ ನಿರ್ಬಂಧ ಹಾಕುವಂತೆ ಅಲ್ಲಿನ ಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.