ಲಂಡನ್: ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್‌ನ ವಿಚ್ಛೇದನವು ಆರ್ಥಿಕ ವಿಭಜನೆಯೊಂದಿಗೆ ಗುರುವಾರ ಕೊನೆಗೊಂಡಿತು.
ಜನರು, ಸರಕು ಮತ್ತು ಸೇವೆಗಳಿಗಾಗಿ ರಾತ್ರಿ 11 ಗಂಟೆಗೆ ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರ ಬಿದ್ದಿದೆ. ಎರಡನೇ ಮಹಾಯುದ್ಧದ ನಂತರ ದೇಶವು ಅನುಭವಿಸಿದ ಅತಿದೊಡ್ಡ ಏಕೈಕ ಆರ್ಥಿಕ ಬದಲಾವಣೆಯನ್ನು ಪೂರ್ಣಗೊಳಿಸಿದೆ. ಯುರೋಪಿಯನ್ ಒಕ್ಕೂಟ- ಯುಕೆ ವ್ಯಾಪಾರ ಒಪ್ಪಂದವು ಹೊಸ ನಿರ್ಬಂಧಗಳೊಂದಿಗೆ ಮುಂದುವರೆದಿದೆ.
ಬ್ರೆಕ್ಸಿಟ್‌ಗೆ ಬೆಂಬಲ ನೀಡಿದ ಪ್ರಧಾನಿ ಬೋರಿಸ್ ಜಾನ್ಸನ್, ದೇಶವನ್ನು ಯುರೋಪಿಯನ್ ಒಕ್ಕೂಟದಿಂದ ಹೊರ ಬರಲು ಸಹಾಯ ಮಾಡಿದರು, ಇದನ್ನು "ಈ ದೇಶಕ್ಕೆ ಅದ್ಭುತ ಕ್ಷಣ" ಎಂದು ಕರೆದಿದ್ದಾರೆ.
ಓದಿ ಬ್ರೇಕ್ಸಿಟ್ ಮಸೂದೆ ಬ್ರಿಟನ್ ಸಂಸತ್ನಲ್ಲಿ ಅಂಗೀಕಾರ : ಯುರೋಪಿಯನ್ ಒಕ್ಕೂಟದಿಂದ ಯುಕೆ ಅಧಿಕೃತವಾಗಿ ಹೊರಕ್ಕೆ
"ನಮ್ಮ ಕೈಯಲ್ಲಿಯೇ ನಮ್ಮ ಸ್ವಾತಂತ್ರ್ಯವಿದೆ ಮತ್ತು ಅದನ್ನು ಹೆಚ್ಚು ಬಳಸಿಕೊಳ್ಳಬಹುದಾಗಿದೆ" ಎಂದು ಅವರು ಹೊಸ ವರ್ಷದ ವೀಡಿಯೊ ಸಂದೇಶದಲ್ಲಿ ಅವರು ಹೇಳಿದ್ದಾರೆ.
ರಾಜಕೀಯ ಬ್ರೆಕ್ಸಿಟ್ನ 11 ತಿಂಗಳ ನಂತರ ಆರ್ಥಿಕವಾಗಿ ವಿಭಜನೆಯಾಗಿವೆ. ಬೇರ್ಪಟ್ಟ ದಂಪತಿಗಳು ಒಟ್ಟಿಗೆ ವಾಸಿಸುವಂತೆ ಯುಕೆ ಮತ್ತು ಯುರೋಪಿಯನ್ ಒಕ್ಕೂಟ ಇಷ್ಟುದಿನ ಒಟ್ಟಿಗೇ ಇದ್ದವು, ಆದರೆ ಅಂತಿಮವಾಗಿ ಬ್ರಿಟನ್ ಹೊರ ಬಂದಿದೆ.