ರಿಯೊ ಡಿ ಜನೈರೊ: ಅಮೆಜಾನ್ ಮಳೆ ಕಾಡು ಎಕರೆ ರಾಜ್ಯದಲ್ಲಿ ಪ್ರವಾಹಕ್ಕೆ ತುತ್ತಾಗಿರುವ ನಗರಗಳಿಗೆ ಬ್ರೆಜಿಲ್ನ ಅಧ್ಯಕ್ಷ ಜೈರ್ ಬೋಲ್ಸೊನಾರೊ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ವಿಪರೀತ ಮಳೆಯಿಂದಾಗಿ ಹಲವಾರು ನದಿಗಳು ಉಕ್ಕಿ ಹರಿದ ಪರಿಣಾಮ ಪ್ರವಾಹ ಉಂಟಾಗಿ ಸುಮಾರು 120,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ರಾಜ್ಯದ ಅಗ್ನಿಶಾಮಕ ಇಲಾಖೆಯ ಮಾಹಿತಿಯ ಪ್ರಕಾರ, ಫೆಡರಲ್ ಅಧಿಕಾರಿಗಳು ಹತ್ತು ಪುರಸಭೆಗಳಲ್ಲಿ ವಿಪತ್ತು ಸ್ಥಿತಿಯನ್ನು ಘೋಷಿಸಿದ್ದಾರೆ.
ಓದಿ:360 ಡಿಗ್ರಿಯಲ್ಲಿ ಮೊದಲ ಹೈ-ಡೆಫಿನಿಷನ್ ಚಿತ್ರ ಕಳುಹಿಸಿದ ಮಾರ್ಸ್ ರೋವರ್
ಸೇನಾ ಮಧುರೈರಾ ಪ್ರದೇಶವೂ ಪ್ರವಾಹಕ್ಕೆ ಹೆಚ್ಚು ತುತ್ತಾಗಿದ್ದು, ಅದರ ಶೇ.70ರಷ್ಟು ಪ್ರದೇಶ ಪ್ರವಾಹದಿಂದ ಮುಳುಗಿದೆ. ಸುಮಾರು 4,000ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ.
ಹಲವಾರು ಪುರಸಭೆಗಳಲ್ಲಿ ನೀರಿನ ಮಟ್ಟವು ಬುಧವಾರ ಕಡಿಮೆಯಾಗಿದ್ದು, ಆದ್ರೂ ಈ ವಾರ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಕೋವಿಡ್-19, ಡೆಂಘಿ ಜ್ವರ, ಪೆರು ದೇಶದೊಂದಿಗೆ ವಲಸೆ ಬಿಕ್ಕಟ್ಟಿನ ನಡುವೆ ಪ್ರವಾಹ ಈ ದೇಶವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.