ರಿಯೋ ಡಿ ಜನೈರೋ(ಬ್ರೆಜಿಲ್): ಶಂಕಿತರ ಗಂಟಲು, ರಕ್ತದ ಮಾದರಿ ಪರೀಕ್ಷೆ ಮತ್ತು ಸೋಂಕಿತರ ಚಿಕಿತ್ಸೆ ವಿಳಂಬವಾಗುತ್ತಿರುವ ಕಾರಣ ಲ್ಯಾಟಿನ್ ಅಮೆರಿಕದಂತೆ ಬ್ರೆಜಿಲ್ ಕೂಡ ಕೊರೊನಾ ಹಾಟ್ಸ್ಪಾಟ್ ಪ್ರದೇಶವಾಗಿ ಮಾರ್ಪಾಡಾಗುತ್ತಿದೆ. ಕೊರೊನಾ ವೈರಸ್ ನಂಜು ಬ್ರೆಜಿಲ್ನಾದ್ಯಂತ ಅಗಾಧವಾಗಿ ಹರಡುತ್ತಿರುವ ಕಾರಣ ಸೋಂಕಿತರು ಮತ್ತು ಮೃತರ ಸಂಖ್ಯೆ ಒಂದೇ ಸಮನೆ ಏರುತ್ತಿವೆ.
ರಿಯೋ ಡಿ ಜನೈರೋದ ಪ್ರಮುಖ 4 ನಗರಗಳಲ್ಲಿ ಆಸ್ಪತ್ರೆಗಳ ವ್ಯವಸ್ಥೆ ಕುಸಿದಿದೆ. ಆ ಆಸ್ಪತ್ರೆಗಳಲ್ಲಿ ಈಗಾಗಲೇ ಎಲ್ಲ ಹಾಸಿಗೆಗಳು ತುಂಬಿವೆ. ಹೊಸದಾಗಿ ಪ್ರಕರಣ ಕಂಡು ಬಂದ ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮುಂದಾಗುವ ಅನಾಹುತಗಳ ಕುರಿತು ವೈದ್ಯಕೀಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
211 ಮಿಲಿಯನ್ ಜನಸಂಖ್ಯೆ ಇರುವ ದೇಶದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದು ತುಂಬಾ ವಿಳಂಬವಾಗುತ್ತಿದೆ. ಇದು ಹೀಗೆ ಮುಂದುವರೆದರೆ ಈಗ ಆದ ವರದಿಗಿಂತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅತಿದೊಡ್ಡ ನಗರವಾದ ಮನೌಸ್‌ನಲ್ಲಿ ಸ್ಮಶಾನವೊಂದರಲ್ಲಿ ಸಾಮೂಹಿಕ ಸಮಾಧಿಗಳನ್ನು ಅಗೆಯಲಾಗಿದೆ. ಈಗಾಗಲೇ ಇಲ್ಲಿ ಅಧಿಕ ಸಾವುಗಳು ಸಂಭವಿಸಿವೆ. ದಿನಾಲು 100ಕ್ಕೂ ಹೆಚ್ಚುಗಳನ್ನು ಶವಗಳನ್ನು ಸಮಾಧಿ ಮಾಡಲಾಗುತ್ತಿದೆ. ಚಿಕಿತ್ಸೆಯ ವೇಗ ಹೆಚ್ಚಾಗಲಿಲ್ಲವಾದರೆ, ಸಾವು ದ್ವಿಗುಣವಾಗಲಿದೆ ಎಂದಿದ್ದಾರೆ.
ಒಂದು ಕ್ಷಣವೂ ಬಿಡುವಿಲ್ಲದೆ 36 ಗಂಟೆಗಳ ಕಾಲದಿಂದ ಒಂದು ಮೃತದೇಹದ ನಂತರ ಮತ್ತೊಂದು ದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು 20 ವರ್ಷದ ಶವಗಳನ್ನು ಪೂರೈಸುವ ವಾಹನದ ಚಾಲಕ ಯಟಾಲೋ ರೋಡ್ರಿಗಸ್ ಹೇಳಿದರು.
ಈವರೆಗೂ ಸುಮಾರು 53,000 ಕ್ಕೂ ಹೆಚ್ಚು ಪ್ರಕರಣಗಳನ್ನು ಮತ್ತು 3,600 ಕ್ಕೂ ಅಧಿಕ ಸಾವುಗಳನ್ನು ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಗುರುವಾರ ಒಂದೇ ದಿನವೇ 3,700 ಪ್ರಕರಣಗಳು, 400ಕ್ಕೂ ಹೆಚ್ಚು ಸಂಭವಿಸಿದೆ. ಇದು ಕಠೋರ ದಿನವಾಗಿ ಪರಿಣಮಿಸಿದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಸಾವಿನ ಸಂಖ್ಯೆ ಮತ್ತಷ್ಟು ಅಧಿಕವಾಗಲಿವೆ ಎಂದು ತಜ್ಞರು ಹೇಳಿದ್ದಾರೆ.