ETV Bharat / international

ಬ್ಲ್ಯಾಕ್​​​ ಪ್ಯಾಂಥರ್ ತಾರೆ ಚಾಡ್ವಿಕ್ ಬೋಸ್ಮನ್ ಕ್ಯಾನ್ಸರ್​ಗೆ ಬಲಿ - ನಟ ಚಾಡ್ವಿಕ್ ಬೋಸ್ಮನ್

ಮಾರ್ವೆಲ್ ಸಿನಿಮ್ಯಾಟಿಕ್ ಬ್ರಹ್ಮಾಂಡದಲ್ಲಿ ರೀಗಲ್ ಬ್ಲ್ಯಾಕ್ ಪ್ಯಾಂಥರ್ ಆಗಿ ಖ್ಯಾತಿ ಪಡೆದಿರುವ ನಟ ಚಾಡ್ವಿಕ್ ಬೋಸ್ಮನ್ ಕ್ಯಾನ್ಸರ್​ನಿಂದ ಶುಕ್ರವಾರ ನಿಧನರಾಗಿದ್ದಾರೆ ಎಂದು ಅವರ ಪ್ರತಿನಿಧಿ ತಿಳಿಸಿದ್ದಾರೆ.

Black Panther star Chadwick Boseman dies of cancer, aged 43
ಬ್ಲ್ಯಾಕ್ ಪ್ಯಾಂಥರ್ ತಾರೆ ಚಾಡ್ವಿಕ್ ಬೋಸ್ಮನ್ ಕ್ಯಾನ್ಸರ್ ಗೆ ಬಲಿ
author img

By

Published : Aug 29, 2020, 12:26 PM IST

ನ್ಯೂಯಾರ್ಕ್: ಮಾರ್ವೆಲ್ ಸಿನಿಮ್ಯಾಟಿಕ್ ಬ್ರಹ್ಮಾಂಡದಲ್ಲಿ ರೀಗಲ್ ಬ್ಲ್ಯಾಕ್ ಪ್ಯಾಂಥರ್ ಆಗಿ ಖ್ಯಾತಿ ಪಡೆಯುವ ಮೊದಲು ಬ್ಲ್ಯಾಕ್ ಐಕಾನ್​ಗಳಾದ ಜಾಕಿ ರಾಬಿನ್ಸನ್ ಮತ್ತು ಜೇಮ್ಸ್ ಬ್ರೌನ್ ಪಾತ್ರವನ್ನು ನಿರ್ವಹಿಸಿದ ನಟ ಚಾಡ್ವಿಕ್ ಬೋಸ್ಮನ್ ಕ್ಯಾನ್ಸರ್​ನಿಂದ ಶುಕ್ರವಾರ ನಿಧನರಾಗಿದ್ದಾರೆ ಎಂದು ಅವರ ಪ್ರತಿನಿಧಿ ತಿಳಿಸಿದ್ದಾರೆ.

ಬೋಸ್ಮನ್ ಲಾಸ್ ಏಂಜಲೀಸ್ ಪ್ರದೇಶದ ತಮ್ಮ ಮನೆಯಲ್ಲಿ ಹೆಂಡತಿ ಮತ್ತು ಕುಟುಂಬಸ್ಥರೊಡನೆ ವಾಸಿಸುತ್ತಿದ್ದರು ಎಂದು ಅವರ ಮಾಧ್ಯಮ ಸಲಹೆಗಾರ ಅಸೋಸಿಯೇಟೆಡ್ ಪ್ರೆಸ್​​ಗೆ ತಿಳಿಸಿದ್ದಾರೆ.

ತಮ್ಮ 43ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಬೋಸ್ಮನ್​‌ ಈ ವರ್ಷದ ಏಪ್ರಿಲ್​ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಾಗ ಅವರ ತೆಳ್ಳನೆಯ ಶರೀರ ಕಂಡು ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಬೋಸ್ಮನ್​​​ಗೆ​ ನಾಲ್ಕು ವರ್ಷಗಳ ಹಿಂದೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆದರೆ, ಬೋಸ್ಮನ್​ ತಮ್ಮ ರೋಗದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.