ಜಿನಿವಾ : ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ವಿಟ್ಜರ್‌ಲ್ಯಾಂಡ್‌ನ ಜಿನಿವಾದಲ್ಲಿಂದು ಮಹತ್ವದ ಚರ್ಚೆಯೊಂದಿಗೆ ಶೃಂಗಸಭೆಯನ್ನು ಮುಕ್ತಾಯಗೊಳಿಸಿದ್ದಾರೆ. ಉಭಯ ದೇಶಗಳ ನಾಯಕರ ಭೇಟಿಯನ್ನು ಯುಎಸ್ ಅಧ್ಯಕ್ಷ ಬೈಡನ್ "ಎರಡು ಮಹಾನ್ ಶಕ್ತಿಗಳು" ಎಂದು ಕರೆದಿದ್ದಾರೆ. ನಿರೀಕ್ಷೆಗಿಂತ ಮೊದಲೇ ಈ ಜೋಡಿ 2 ಬಾರಿ ಮಾತುಕತೆ ನಡೆಸಿತು. ಸುಮಾರು 65 ನಿಮಿಷಗಳ ಕಾಲ ಇಬ್ಬರು ನಾಯಕರು ಜೊತೆಗಿದ್ದರು.
ನಾಯಕರ ಭೇಟಿಯನ್ನು 2 ಆವೃತ್ತಿಗಳಾಗಿ ವಿಭಾಗ ಮಾಡಲಾಗಿತ್ತು. ಮೊದಲು ಉಭಯ ನಾಯಕರು 4-5 ಗಂಟೆಗಳ ಕಾಲ ಮಾತುಕತೆ ನಡೆಸುತ್ತಾರೆ ಎನ್ನಲಾಗಿತ್ತು. ಆದ್ರೆ, 3 ಗಂಟೆಗೂ ಮೊದಲೇ ಸಭೆ ಮುಕ್ತಾಯವಾಗಿದೆ. ಓರ್ವ ವಿದೇಶಾಂಗ ಸಚಿವರು ಸೇರಿದಂತೆ ಆರಂಭದ ಸಭೆಯಲ್ಲಿ ಇಬ್ಬರು ಅಧ್ಯಕ್ಷರು ಮಾತ್ರ ಭಾಗವಹಿಸಿದ್ದರು. ಸಭೆಯ ಪ್ರಾರಂಭದಲ್ಲಿ ಇಬ್ಬರು ನಾಯಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು, ಬೈಡನ್ ಇದನ್ನು "ಇಬ್ಬರು ಮಹಾನ್ ಶಕ್ತಿಗಳ" ನಡುವಿನ ಚರ್ಚೆಯೆಂದು ಕರೆದರಲ್ಲದೆ, "ಮುಖಾಮುಖಿಯಾಗಿ ಭೇಟಿಯಾಗುವುದು ಯಾವಾಗಲೂ ಉತ್ತಮ" ಎಂದು ಹೇಳಿದರು. ಮಾತುಕತೆ ಉತ್ತಮವಾಗಿತ್ತು ಎಂದು ರಷ್ಯಾ ಅಧ್ಯಕ್ಷ ಪುಟಿನ್ ಬಣ್ಣಿಸಿದರು.
ಪುಟಿನ್ ಅವರನ್ನು ನಂಬಬಹುದೇ ಎಂದು ವರದಿಗಾರರೊಬ್ಬರ ಪ್ರಶ್ನೆಗೆ ಬೈಡನ್ ತಲೆಯಾಡಿಸಿದರು. ಆದರೆ, ಅಧ್ಯಕ್ಷರು ಯಾವುದೇ ಒಂದು ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಿಲ್ಲ. ಮಾಧ್ಯಮಗಳಿಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂದು ಶ್ವೇತಭವನವು ಕೂಡಲೇ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ. ಇದೇ ವೇಳೆ ಜೈಲಿನಲ್ಲಿರುವ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರು ಭಯಭೀತರಾಗಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಲು ಪುಟಿನ್ ನಿರಾಕರಿಸಿದರು.
ಉಭಯ ನಾಯಕರು ಕೈಕುಲುಕಿದರು. ಬೈಡನ್ ಮೊದಲು ಕೈ ಚಾಚಿದರು ಮತ್ತು ರಷ್ಯಾದ ನಾಯಕನನ್ನು ನೋಡಿ ಮುಗುಳ್ನಕ್ಕರು. ಕ್ಷಣಗಳ ಹಿಂದೆ ಅವರು ಸ್ವಿಸ್ ಅಧ್ಯಕ್ಷ ಗೈ ಪಾರ್ಮೆಲಿನ್ ಅವರೊಂದಿಗೆ ಪೋಸ್ ನೀಡಿದ್ದ ವೇಳೆ ಅವರು ಶೃಂಗಸಭೆಗೆ ಸ್ವಿಟ್ಜರ್ಲೆಂಡ್ಗೆ ಸ್ವಾಗತಿಸಿದರು. ಬೈಡನ್ ಮತ್ತು ಪುಟಿನ್ ಮೊದಲಿಗೆ ಯು.ಎಸ್. ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ತುಲನಾತ್ಮಕವಾಗಿ ಸಭೆ ನಡೆಸಿದರು. ಎರಡೂ ಕಡೆಯವರು ಸಭೆಯಲ್ಲಿ ಅನುವಾದಕರನ್ನು ಹೊಂದಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯ ಬಳಿಕ 40 ನಿಮಿಷಗಳ ವಿರಾಮದ ನಂತರ ಮತ್ತೆ ಸಭೆ ಆರಂಭವಾಯಿತು. ಈ ವೇಳೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ನಡೆದಿದೆ.