ಕ್ಯಾನ್ಬೆರಾ : ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಮಾವಿನ ಚಟ್ನಿಯೊಂದಿಗೆ ಸಸ್ಯಾಹಾರಿ 'ಸಮೋಸಾ'ಗಳನ್ನು ತಯಾರಿಸಿದ್ದಾರೆ. ಅಷ್ಟೇ ಅಲ್ಲ, ಇವುಗಳನ್ನು ಪ್ರಧಾನಿ ಮೋದಿ ಜೊತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸ್ಕಾಟ್ ಮಾರಿಸನ್, ‘ಮಾವಿನ ಚಟ್ನಿಯೊಂದಿಗೆ ಬಿಸಿಬಿಸಿ ಸಮೋಸಾಗಳನ್ನು ತಯಾರಿಸಲಾಗಿದೆ. ಇವುಗಳನ್ನು ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಶೇರ್ ಮಾಡಲು ಬಯಸುತ್ತೇನೆ. ಅವರು ಸಸ್ಯಾಹಾರಿ. ಅದಕ್ಕಾಗಿ ನಾನು ಅವರೊಂದಿಗೆ ಸಮೋಸಾ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂದಿದ್ದಾರೆ.
-
Sunday ScoMosas with mango chutney, all made from scratch - including the chutney! A pity my meeting with @narendramodi this week is by videolink. They’re vegetarian, I would have liked to share them with him. pic.twitter.com/Sj7y4Migu9
— Scott Morrison (@ScottMorrisonMP) May 31, 2020 " class="align-text-top noRightClick twitterSection" data="
">Sunday ScoMosas with mango chutney, all made from scratch - including the chutney! A pity my meeting with @narendramodi this week is by videolink. They’re vegetarian, I would have liked to share them with him. pic.twitter.com/Sj7y4Migu9
— Scott Morrison (@ScottMorrisonMP) May 31, 2020Sunday ScoMosas with mango chutney, all made from scratch - including the chutney! A pity my meeting with @narendramodi this week is by videolink. They’re vegetarian, I would have liked to share them with him. pic.twitter.com/Sj7y4Migu9
— Scott Morrison (@ScottMorrisonMP) May 31, 2020
ಅವರು ತಿಂಡಿಗಳ ತಟ್ಟೆಯನ್ನು ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದು, ಮಾರಿಸನ್ ಅವರ ಟ್ವೀಟ್‌ಗೆ ಉತ್ತರಿಸಿದ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ, ‘ನಿಮ್ಮ ಹೆಸರನ್ನು ಮೈಕೆಲಿನ್ ಸ್ಟಾರ್‌ಗೆ ಪ್ರಸ್ತಾಪಿಸುತ್ತೇನೆ’ ಎಂದು ಹೇಳಿದ್ದಾರೆ.
ಮೋದಿ- ಸ್ಕಾಟ್ ಮಾರಿಸನ್ ಈ ಇಬ್ಬರು ಉಭಯ ಪ್ರಧಾನಮಂತ್ರಿಗಳು ಜೂನ್ 4ರಂದು ಸಭೆ ನಡೆಸಲಿದ್ದಾರೆ.