ಲಂಡನ್: ಬ್ರಿಟಿಷ್ ಔಷಧ ತಯಾರಿಕೆ ಸಂಸ್ಥೆ "ಅಸ್ಟ್ರಾಜೆನೆಕಾ" ತನ್ನ COVID-19 ಲಸಿಕೆಯ ಕೊನೆಯ ಹಂತದ ಪ್ರಯೋಗಗಳು ರೋಗವನ್ನು ತಡೆಗಟ್ಟುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಹೇಳಿದೆ.
ಒಂದು ತಿಂಗಳ ಅಂತರದಲ್ಲಿ ನೀಡಲಾದ ಲಸಿಕೆಯ ಒಂದು ಡೋಸ್ (ಎರಡು ಬಾರಿ) ಶೇ.90ರಷ್ಟು ಪರಿಣಾಮಕಾರಿ ಫಲಿತಾಂಶ ನೀಡಿದೆ. ಫಲಿತಾಂಶಗಳ ಬಗ್ಗೆ ವಿಜ್ಞಾನಿಗಳಲ್ಲಿ ಸಂತಸ ವ್ಯಕ್ತವಾಗಿದೆ ಎಂದು ಪ್ರಮುಖ ಸಂಶೋಧಕ ಡಾ. ಆಂಡ್ರ್ಯೂ ಪೊಲಾರ್ಡ್ ಹೇಳಿದರು.
ಈ ಸಂಶೋಧನೆಯಿಂದ ತಯಾರಾಗಿರುವ ಲಸಿಕೆ ತುಂಬಾ ಪರಿಣಾಮಕಾರಿಯಾಗಿದೆ. ಅನೇಕ ಜೀವಗಳನ್ನು ಉಳಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಕೋವಿಡ್ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಅಮೆರಿಕಾದ ಔಷಧಿ ತಯಾರಿಕಾ ಸಂಸ್ಥೆಗಳಾದ ಫಿಜರ್ ಮತ್ತು ಮೊಡೆರ್ನಾ ಕಳೆದ ವಾರ ಕೊನೆಯ ಹಂತದ ಪ್ರಯೋಗಗಳ ಪ್ರಾಥಮಿಕ ಫಲಿತಾಂಶಗಳನ್ನು ವರದಿ ಮಾಡಿವೆ. ಅವರ COVID-19 ಲಸಿಕೆಗಳು ಸುಮಾರು ಶೇ. 95 ಪ್ರತಿಶತ ಪರಿಣಾಮಕಾರಿ ಎಂದು ಹೇಳಿಕೊಂಡಿವೆ.