ETV Bharat / international

'ಪುಟಿನ್​ ಅವರನ್ನ ನಿಲ್ಲಿಸದಿದ್ದರೆ ನಮಗೆ ಯಾವುದೇ ಸ್ಥಳ ಸುರಕ್ಷಿತವಲ್ಲ'.. ಭಾವನಾತ್ಮಕ ಪತ್ರ ಬರೆದ ಉಕ್ರೇನ್​ ಅಧ್ಯಕ್ಷರ ಪತ್ನಿ! - ಉಕ್ರೇನ್ ರಷ್ಯಾ ಯುದ್ಧ

ಉಕ್ರೇನ್​ ಮೇಲೆ ಕಳೆದ 14 ದಿನಗಳಿಂದ ರಷ್ಯಾ ಮಿಲಿಟರಿ ಪಡೆ ಕಾರ್ಯಾಚರಣೆ ನಡೆಸುತ್ತಿದ್ದು, ಪರಿಣಾಮ ಅಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದರ ಮಧ್ಯೆ ಉಕ್ರೇನ್​ ಅಧ್ಯಕ್ಷರ ಪತ್ನಿ ಒಲೆನಾ ಭಾವನಾತ್ಮಕ ಪತ್ರ ಬರೆದಿದ್ದಾರೆ.

Olena Zelenska open letter
Olena Zelenska open letter
author img

By

Published : Mar 9, 2022, 9:58 AM IST

ಕೀವ್​​(ಉಕ್ರೇನ್​​): ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದಾಗಿನಿಂದಲೂ ಬಹುತೇಕ ಎಲ್ಲ ನಗರಗಳು ಧ್ವಂಸಗೊಂಡಿದ್ದು, ಸಾವಿರಾರು ಜನರು, ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧ ಪ್ರಾರಂಭವಾಗಿ 14 ದಿನಗಳು ಕಳೆಯುತ್ತಾ ಬಂದರೂ, ಎರಡು ದೇಶಗಳು ಮಹತ್ವದ ಒಪ್ಪಂದಕ್ಕೆ ಬಂದಿಲ್ಲ. ಇದರ ಮಧ್ಯೆ ಉಕ್ರೇನ್​ ಅಧ್ಯಕ್ಷರ ಪತ್ನಿ ಒಲೆನಾ ಮಾಧ್ಯಮಗಳಿಗೆ ಭಾವನಾತ್ಮಕವಾಗಿ ಮುಕ್ತ ಪತ್ರ ಬರೆದಿದ್ದಾರೆ.

'ಪುಟಿನ್​ ಅವರನ್ನ ನಿಲ್ಲಿಸದಿದ್ದರೆ, ಯಾವುದೇ ಸ್ಥಳ ಸುರಕ್ಷಿತವಲ್ಲ' ಎಂದು ಬಹಿರಂಗ ಪತ್ರದಲ್ಲಿ ಎಚ್ಚರಿಸಿದ್ದಾರೆ. ಜೊತೆಗೆ ಉಕ್ರೇನಿಯನ್​ ನಾಗರಿಕರ ಸಾಮೂಹಿಕ ಹತ್ಯೆಗೋಸ್ಕರ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​ ಅವರನ್ನ ಖಂಡಿಸಿದ್ದಾರೆ. ಮುಂದೊಂದು ದಿನ ನಿಮ್ಮ ನಗರಕ್ಕೂ ರಷ್ಯಾ ಪ್ರವೇಶ ಮಾಡಬಹುದು. ಈಗಲೇ ಅದನ್ನ ತಡೆದು ನಿಲ್ಲಿಸುವ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಫೆ. 24ರಂದು ರಷ್ಯಾದ ಮಿಲಿಟರಿ ಕಾರ್ಯಾಚರಣೆ ಘೋಷಣೆಯಿಂದ ನಾವೆಲ್ಲರೂ ಎಚ್ಚೆತ್ತುಗೊಂಡಿದ್ದೇವೆ. ಯುದ್ಧ ವಿಮಾನ, ಕ್ಷಿಪಣಿ ನಮ್ಮ ನಗರಗಳನ್ನ ಸುತ್ತುವರೆದಿವೆ. ಈಗಾಗಲೇ ಅನೇಕ ನಾಗರಿಕರ ಸಾಮೂಹಿಕ ಹತ್ಯೆಯಾಗಿದ್ದು, ಮಕ್ಕಳು ತಮ್ಮ ಪ್ರಾಣ ಕಳೆದುಕೊಂಡಿವೆ. ಉಕ್ರೇನ್​ ಶಾಂತಿ ಬಯಸುತ್ತದೆ. ತನ್ನ ಗಡಿ ರಕ್ಷಣೆ ಮಾಡಿಕೊಳ್ಳಲು ಬದ್ಧವಾಗಿದೆ ಎಂದಿದ್ದಾರೆ.

ಇದನ್ನೂ ಓದಿರಿ: ಉಕ್ರೇನ್​​ನಿಂದ ಪಾಕ್​ ವಿದ್ಯಾರ್ಥಿನಿ ರಕ್ಷಣೆ.. ಮೋದಿ, ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಹೇಳಿದ ಅಸ್ಮಾ!

ಆತ್ಮೀಯ ಮಾಧ್ಯಮಗಳೇ, ನಾನು ನಿಮ್ಮ ಬಳಿ ಮನವಿ ಮಾಡುತ್ತೇನೆ. ಉಕ್ರೇನ್​​ನಲ್ಲಿ ಏನಾಗುತ್ತಿದೆ ಎಂಬುದನ್ನ ತೋರಿಸುತ್ತಲೇ ಇರಿ ಮತ್ತು ಸತ್ಯವನ್ನ ತೋರಿಸಿ. ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಪ್ರತಿಯೊಂದು ಸಾಕ್ಷ್ಯವು ನಿರ್ಣಾಯಕವಾಗಿದೆ. ನಾಗರಿಕರ ಪ್ರಾಣ ರಕ್ಷಣೆ ಮಾಡುವ ನೆಪದಲ್ಲಿ ನಾಳೆ ನಿಮ್ಮ ನಗರಗಳಿಗೆ ಆಕ್ರಮಣವಾಗಬಹುದು.ಪರಮಾಣು ಯುದ್ಧವನ್ನ ಪ್ರಾರಂಭಿಸುವ ಬೆದರಿಕೆ ಹಾಕುತ್ತಿರುವ ಪುಟಿನ್​ ಅವರನ್ನ ತಡೆಯದಿದ್ದರೆ, ನಮಗೆ ಜಗತ್ತಿನಲ್ಲಿ ಯಾವುದೇ ಸುರಕ್ಷಿತ ಸ್ಥಳವಿಲ್ಲ ಎಂದಿದ್ದಾರೆ.

ಉಕ್ರೇನ್ ಮೇಲೆ ಕಳೇದ 14 ದಿನಗಳಿಂದ ಯುದ್ಧ ಮುಂದುವರೆಸಿರುವ ರಷ್ಯಾ ಇಂದು ಕೂಡ, ಝೆಟೊಮಿರ್​, ಖಾರ್ಕಿನ್​, ಸುಮ ಸೇರಿದಂತೆ ಪ್ರಮುಖ ನಗರಗಳ ಪ್ರಮುಖ ಕಟ್ಟಡ ಹೊಡೆದುರುಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.