ಕೀವ್(ಉಕ್ರೇನ್): ಉಕ್ರೇನ್ನ ವಿವಿಧ ಪ್ರಮುಖ ನಗರಗಳ ಮೇಲೆ ರಷ್ಯಾ ಮಿಲಿಟರಿ ಪಡೆ ತನ್ನ ದಾಳಿ ಮುಂದುವರೆಸಿದೆ. 14ನೇ ದಿನವಾದ ಇಂದು ಕೂಡ ಖಾರ್ಕಿವ್, ಸಮಿ, ಝೈಟೊಮಿರ್ನ ವಸತಿ ಕಟ್ಟಡದ ಮೇಲೆ ವಾಯುದಾಳಿ ನಡೆಸಿದೆ.
ರಷ್ಯಾ ಸೇನೆ ಉಕ್ರೇನ್‌ನಲ್ಲಿ ಯುದ್ಧ ಮುಂದುವರೆಸಿರುವ ಪರಿಣಾಮ ಝೈಟೊಮಿರ್, ಖಾರ್ಕಿವ್‌ನ ವಸತಿ ಪ್ರದೇಶದಲ್ಲಿ ದಾಳಿ ನಡೆಸಿದೆ. ವಾಯುದಾಳಿಯಲ್ಲಿ ಇಂದು ಮೂವರು ಮಕ್ಕಳು ಸೇರಿದಂತೆ 7 ಜನ ಸಾವನ್ನಪ್ಪಿದ್ದಾರೆ. ಜೊತೆಗೆ ಅನೇಕರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಯುದ್ಧ ಪೀಡಿತ ಪ್ರದೇಶದಿಂದ ಅನೇಕ ನಾಗರಿಕರನ್ನ ಸುರಕ್ಷಿತ ಸ್ಥಳಕ್ಕೆ ಕರೆತರುವ ಕೆಲಸ ನಡೆಯುತ್ತಿದೆ.
ಮಾರ್ಷಲ್ ಆಟ್ಸ್ ಚಾಂಪಿಯನ್ ಸಾವು: ಉಕ್ರೇನ್ನ ಸಮಿಯಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 16 ವರ್ಷದ ಮಾರ್ಷಲ್ ಆರ್ಟ್ಸ್ ಚಾಂಪಿಯನ್ ಸಾವನ್ನಪ್ಪಿದ್ದಾರೆ. 16 ವರ್ಷದ ಆರ್ಟಿಯೋಮ್ ಪ್ರಿಯೆಮೆಂಕೊ ಸಾವನ್ನಪ್ಪಿದ್ದಾರೆಂದು ಅಲ್ಲಿನ ಸುದ್ದಿಸಂಸ್ಥೆ ವರದಿ ಮಾಡಿದ್ದು, ದಾಳಿ ವೇಳೆ ಇಬ್ಬರು ಕಿರಿಯ ಸಹೋದರರು ಹಾಗೂ ಇಡೀ ಕುಟುಂಬ ಬಲಿಯಾಗಿದ್ದಾರೆಂದು ತಿಳಿದು ಬಂದಿದೆ. ಇನ್ನು ಉಕ್ರೇನ್ನ ಸಮಿ ನಗರದಲ್ಲಿದ್ದ 5 ಸಾವಿರ ಜನರನ್ನ ಸ್ಥಳಾಂತರ ಮಾಡಲಾಗಿದೆ. ಇದರ ಮಧ್ಯೆ ಉಕ್ರೇನ್ನ ಮರಿಯುಪೋಲ್ನಲ್ಲಿ ಕುಡಿಯುಲು ನೀರು ಸಿಗದ ಕಾರಣ 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆಂದು ವರದಿಯಾಗಿದೆ.
-
🥀In #Sumy, 16-year-old Artyom Pryimenko, the champion of #Ukraine in sambo, was killed during an airstrike. His entire family died with him, including two younger brothers. pic.twitter.com/MAov4aobaX
— NEXTA (@nexta_tv) March 9, 2022 " class="align-text-top noRightClick twitterSection" data="
">🥀In #Sumy, 16-year-old Artyom Pryimenko, the champion of #Ukraine in sambo, was killed during an airstrike. His entire family died with him, including two younger brothers. pic.twitter.com/MAov4aobaX
— NEXTA (@nexta_tv) March 9, 2022🥀In #Sumy, 16-year-old Artyom Pryimenko, the champion of #Ukraine in sambo, was killed during an airstrike. His entire family died with him, including two younger brothers. pic.twitter.com/MAov4aobaX
— NEXTA (@nexta_tv) March 9, 2022
ರಷ್ಯಾ ಮಿಲಿಟರಿ ಪಡೆಗೆ ಉಕ್ರೇನ್ ಕೂಡ ತೀವ್ರ ತಿರುಗೇಟು ನೀಡುತ್ತಿದ್ದು, ಮೈಕೊಲೈವ್ನ ರಷ್ಯಾ ಸೇನೆಯ ಹೆಲಿಕಾಪ್ಟರ್ ಹೊಡೆದುರುಳಿಸಿದೆ.
ಸಾವಿರಾರು ಸಾವು-ನೋವು: ಲಭ್ಯವಾಗಿರುವ ಮಾಹಿತಿ ಪ್ರಕಾರ ಇಲ್ಲಿಯವರೆಗೆ 1,335 ನಾಗರಿಕರು ಸಾವನ್ನಪ್ಪಿದ್ದು, ಇದರಲ್ಲಿ 38 ಮಕ್ಕಳು ಸೇರಿಕೊಂಡಿದ್ದಾರೆ. ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆಂದು ವಿಶ್ವಸಂಸ್ಥೆ ತಿಳಿಸಿದೆ.