ಬಖ್ಮಾಚ್( ಉಕ್ರೇನ್): ರಷ್ಯಾ ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ತನ್ನ ದಾಳಿ ಮುಂದುವರೆಸಿದೆ. ಈ ನಡುವೆ ಉತ್ತರ ಉಕ್ರೇನ್‌ನ ಬಖ್ಮಾಚ್ ಮೇಲೂ ರಷ್ಯಾ ಸೈನಿಕರು ದಾಳಿ ನಡೆಸಿದ್ದಾರೆ. ಇಲ್ಲಿನ ಬೀದಿಗಳಲ್ಲಿ ಎಂಟ್ರಿಕೊಟ್ಟಿರುವ ರಷ್ಯನ್ ಟ್ಯಾಂಕರ್ವೊಂದನ್ನು ಉಕ್ರೇನಿಯನ್ ವ್ಯಕ್ತಿಯೊಬ್ಬ ತನ್ನ ಕೈಗಳಿಂದ ಏಕಾಂಗಿಯಾಗಿ ನಿಲ್ಲಿಸುತ್ತಿರುವ ವಿಡಿಯೋ ಈಗ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು ಆ ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಂಚಿಕೊಂಡಿದೆ.
- " class="align-text-top noRightClick twitterSection" data="
">
ಉಕ್ರೇನ್‌ನ ಅಧಿಕೃತ Instagram ಅಕೌಂಟ್ನಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ರಷ್ಯಾದ ಬೃಹತ್ ಟ್ಯಾಂಕ್‌ವೊಂದನ್ನು ನಾಗರಿಕನನ್ನು ಬೀದಿಯಲ್ಲಿ ವೇಗವಾಗಿ ಹಿಂದಕ್ಕೆ ತಳ್ಳುತ್ತಿರುವುದನ್ನು ಚಿತ್ರಿಸಲಾಗಿದೆ. ಚಲಿಸುವ ಟ್ಯಾಂಕರ್ವೊಂದರ ಮುಂಭಾಗಕ್ಕೆ ತನ್ನ ಬರಿ ಕೈಗಳನ್ನು ಇರಿಸಿ, ತನ್ನ ಸಂಪೂರ್ಣ ಶಕ್ತಿ ಹಾಕಿ ಟ್ಯಾಂಕ್ ಅನ್ನು ಹಿಂದಕ್ಕೆ ತಳ್ಳುತ್ತಿರುವ ದೃಶ್ಯ ಸಖತ್ ಸದ್ದು ಮಾಡುತ್ತಿದೆ.
ಈತನ ಸಾಹಸ ನೋಡಿ, ಸ್ಥಳೀಯರು ಆತನ ಹತ್ತಿರ ಧಾವಿಸುತ್ತಿದ್ದಂತೆ ಆತ ನೆಲಕ್ಕೆ ಭಾಗಿ ನಮಸ್ಕರಿಸುತ್ತಾನೆ. ರಷ್ಯಾ ಸಮರ ಸಾರಿದ ಮೂರನೇ ದಿನ ನಡೆದ ಘಟನೆ ಇದಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಬಖ್ಮಾಚ್ ಪಟ್ಟಣದ ಮೂಲಕ ರಷ್ಯಾ ಸೇನೆ ಹಾದು ಹೋಗುವ ವೇಳೆ ಈ ಘಟನೆ ನಡೆದಿದೆ. ದೇಶದ ನಿವಾಸಿಗಳ ಧೈರ್ಯವನ್ನು ಶ್ಲಾಘಿಸುತ್ತಾ, ಸಚಿವಾಲಯವು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದೆ.
ರಷ್ಯಾ ಸುಳ್ಳು ಹೇಳುತ್ತಿದೆ.. ಉಕ್ರೇನ್ ಜನ ಸ್ವತಂತ್ರರಾಗಿದ್ದು, ಅಗತ್ಯಬಿದ್ದರೆ ತಮ್ಮ ಕೈಗಳಿಂದ ರಷ್ಯಾದ ಟ್ಯಾಂಕರ್ಗಳನ್ನು ನಿಲ್ಲಿಸಲು ಸಿದ್ಧರಾಗಿದ್ದಾರೆ ಎಂದು ಈ ವಿಡಿಯೋ ಪೋಸ್ಟ್ ಮಾಡಿ ಉಕ್ರೇನ್ ವಿದೇಶಾಂಗ ಸಚಿವಾಲಯ ಈ ಶೀರ್ಷಿಕೆ ನೀಡಿದೆ.
ಇದನ್ನು ಓದಿ: ರಷ್ಯಾ ದಾಳಿಗೆ 14 ಮಕ್ಕಳು ಸೇರಿ 352 ಮಂದಿ ಬಲಿ: ನಾಗರಿಕ ಪ್ರದೇಶಗಳ ಮೇಲೆ ಬಾಂಬ್ ದಾಳಿ