ETV Bharat / international

ರಷ್ಯಾ ಮಿಲಿಟರಿ ದಾಳಿಗೆ ಉಕ್ರೇನ್​ನ 816 ಜನರು ಬಲಿ: ವಿಶ್ವಸಂಸ್ಥೆ - ರಷ್ಯಾ ದಾಳಿಗೆ ಉಕ್ರೇನ್​ ನಾಗರಿಕರ ಸಾವು

ಉಕ್ರೇನ್​ನ ಮಾನವ ವಸತಿ ಪ್ರದೇಶಗಳ ಮೇಲೂ ರಷ್ಯಾ ಸೇನಾಪಡೆಗಳು ದಾಳಿ ಮಾಡುತ್ತಿವೆ ಎಂಬ ಆರೋಪದ ಬೆನ್ನಲ್ಲೇ ಯುದ್ಧಪೀಡಿತ ದೇಶದಲ್ಲಿ ಈವರೆಗೂ 816 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ.

bombing
ವಿಶ್ವಸಂಸ್ಥೆ
author img

By

Published : Mar 18, 2022, 8:33 PM IST

ಕೀವ್(ಉಕ್ರೇನ್)​: ಉಕ್ರೇನ್​ ಮೇಲೆ ಬಿಡುವಿಲ್ಲದಂತೆ ದಾಳಿ ಮಾಡುತ್ತಿರುವ ರಷ್ಯಾ ಅಲ್ಲಿನ ನಾಗರಿಕರನ್ನು ಗುರಿಯಾಗಿಸಿಕೊಂಡು ಬಾಂಬ್​ ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದರಂತೆ ಉಕ್ರೇನ್​ನಲ್ಲಿ ಇಲ್ಲಿಯವರೆಗೂ ಕನಿಷ್ಠ 816 ನಾಗರಿಕರು ಹತರಾಗಿ, 1333 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ರಷ್ಯಾದ ವಾಯುದಾಳಿ ಮೂಲಗಳಾದ ಕ್ಷಿಪಣಿ, ಶೆಲ್​, ಬಹು ಉಡಾವಣಾ ರಾಕೆಟ್​ಗಳ ದಾಳಿಯಿಂದಾಗಿ ಉಕ್ರೇನ್​ನಲ್ಲಿ ಭಾರಿ ಅನಾಹುತ ಉಂಟಾಗಿದೆ. ಇದು ಅಲ್ಲಿನ ನಾಗರಿಕರನ್ನೂ ಬಲಿ ತೆಗೆದುಕೊಂಡಿದೆ. ಇದು ಉಕ್ರೇನ್​ನಲ್ಲಿ ಭೀಕರತೆ ಸೃಷ್ಟಿಯಾಗಲು ಬಹು ಮುಖ್ಯ ಕಾರಣ ಎಂದು ವಿಶ್ವಸಂಸ್ಥೆಯ ಒಎಚ್​ಸಿಎಚ್​ಆರ್​ ತಂಡ ತಿಳಿಸಿದೆ.

ರಷ್ಯಾದ ದಾಳಿಯಿಂದಾದ ಜೀವಹಾನಿಯ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲು ಸಾಧ್ಯವಾಗುತ್ತಿಲ್ಲ. ಮಾರಿಯುಪೋಲ್​ನಂತಹ ಅತಿ ಭೀಕರ ದಾಳಿಗೆ ತುತ್ತಾದ ಪ್ರದೇಶಗಳಿಂದ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. ಅಲ್ಲದೇ ಈ ಭಾಗದಲ್ಲಿ ಊಹಿಸಲಾಗದಷ್ಟು ಹಾನಿ ಉಂಟಾಗಿರುವ ಸಾಧ್ಯತೆ ಇದೆ ಎಂದು ಉಕ್ರೇನ್​ ಮೇಲೆ ನಿಗಾ ಇಟ್ಟಿರುವ ವಿಶ್ವಸಂಸ್ಥೆಯ ಒಎಚ್​ಸಿಎಚ್​ಆರ್​ ತಂಡ ತಿಳಿಸಿದೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧ: ರಾಜಧಾನಿ ಕೀವ್​ ಸಮೀಪವೇ ಕ್ಷಿಪಣಿ ದಾಳಿ, ವಸತಿ ಪ್ರದೇಶಗಳಲ್ಲಿ ಜೀವ ಭೀತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.