ಹೈದರಾಬಾದ್: ಕೊರೊನಾ ಮಹಾಮಾರಿ ಮೂರನೇ ಅಲೆ ಕೆಲವೊಂದು ವಿಶ್ವದ ಕೆಲವು ದೇಶಗಳಲ್ಲಿ ಜೋರಾಗಿ ಬೀಸಲು ಶುರು ಮಾಡಿದ್ದು, ಜರ್ಮನಿಯಲ್ಲಿ ಒಂದೇ ದಿನ ದಾಖಲೆಯ 50 ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ಗಳು (Covid19) ಪತ್ತೆಯಾಗಿವೆ. ಇದರ ಜೊತೆಗೆ 235 ಜನರು ಸಾವನ್ನಪ್ಪಿದ್ದಾರೆಂದು ಅಲ್ಲಿನ ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಕಳೆದ ಒಂದೇ ವಾರದಲ್ಲಿ ಜರ್ಮನಿಯ ವಿವಿಧ ಭಾಗಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ, ಸಾವಿನ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ.
ಈ ಬಗ್ಗೆ ಮಾತನಾಡಿರುವ ಬರ್ಲಿನ್ ಚಾರಿಟ್ ಆಸ್ಪತ್ರೆಯ ವೈರಾಲಜಿ ವಿಭಾಗದ ಮುಖ್ಯಸ್ಥ ಕ್ರಿಶ್ಚಿಯನ್ ಡ್ರೊಸ್ಟನ್, ಇದೀಗ ನಾವು ತುರ್ತು ಪರಿಸ್ಥಿತಿಯಲ್ಲಿದ್ದೇವೆ. ಸಾಂಕ್ರಾಮಿಕ ಸೋಂಕು ತಡೆಗಟ್ಟಲು ಸ್ಥಳೀಯ ಆಡಳಿತ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ದೇಶದಲ್ಲಿ ಕೋವಿಡ್ (Covid Vaccine) ಲಸಿಕೆ ಅಭಿಯಾನ ಪರಿಣಾಮಕಾರಿಯಾಗದಿರುವುದೇ ಸೋಂಕು ಉಲ್ಭಣಗೊಳ್ಳಲು ಕಾರಣ ಎಂದರು.
ಇದನ್ನೂ ಓದಿ: ಬಿಜೆಪಿ ತೊರೆದ ಬೆಂಗಾಳದ ಜನಪ್ರಿಯ ನಟಿ ಶ್ರಬಂತಿ ಚಟರ್ಜಿ
ಜರ್ಮನಿಯಲ್ಲಿ ಕೋವಿಡ್ ಆರಂಭಗೊಂಡಾಗಿನಿಂದಲೂ ಇಲ್ಲಿಯವರೆಗೆ 4.9 ಮಿಲಿಯನ್ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು 97,198 ಜನರು ಸಾವನ್ನಪ್ಪಿದ್ದಾರೆ.
ಬೀಜಿಂಗ್ನಲ್ಲಿ ಮಾಲ್ಗಳು ಬಂದ್
ಚೀನಾದ ಕೆಲವೊಂದು ಪ್ರದೇಶಗಳಲ್ಲಿ (Sudden Covid Outbreak In China) ಕೊರೊನಾ ಉಲ್ಬಣಗೊಂಡಿರುವ ಕಾರಣ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಬೀಜಿಂಗ್ನಲ್ಲಿ ಶಾಪಿಂಗ್ ಮಾಲ್ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ವಸತಿ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಲಾಗಿದೆ.