ETV Bharat / international

ಮುಂದುವರಿದ ರಷ್ಯಾ ಆಕ್ರಮಣ.. ಉಕ್ರೇನ್​​ ಪರಿಸ್ಥಿತಿ ಶೋಚನೀಯ!

ಮರಿಯುಪೋಲ್ ನಿಂದ 20,000 ಜನರನ್ನು 4,000 ಖಾಸಗಿ ವಾಹನಗಳಲ್ಲಿ ಮಾನವೀಯ ಕಾರಿಡಾರ್ ಮೂಲಕ ಝಪೊರಿಝಿಯಾ ನಗರಕ್ಕೆ ಕರೆದೊಯ್ಯಲಾಗಿದೆ.

Ukraine Russia war
ಮುಂದುವರಿದ ರಷ್ಯಾ ಆಕ್ರಮಣ
author img

By

Published : Mar 16, 2022, 7:11 AM IST

ಕೀವ್​(ಉಕ್ರೇನ್​): ರಷ್ಯಾ ಉಕ್ರೇನ್​ ಯುದ್ಧ ಮುಂದುವರಿದಿದೆ. ಯುದ್ಧದಲ್ಲಿ ನೂರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಮಕ್ಕಳು ಪೋಷಕರನ್ನು ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ. ಆಹಾರ, ನೀರು, ಮೂಲ ಸೌಕರ್ಯಗಳಿಲ್ಲದೇ ನರಳಾಡುವ ಪರಿಸ್ಥಿತಿ ಮುಂದುವರಿದಿದೆ. ಅನೇಕರು ಎಲ್ಲವನ್ನೂ ತೊರೆದು ದೇಶದಿಂದ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಇಷ್ಟೆಲ್ಲ ಆದರೂ ರಷ್ಯಾ ಮಾತ್ರ ಉಕ್ರೇನ್​ನ ಮೇಲೆ ಯುದ್ಧ ಮುಂದುವರಿಸಿದೆ.

ಉಕ್ರೇನಿಯನ್ ಬಂದರುಗಳ ಮೇಲೆ ರಷ್ಯಾ ಪಡೆಗಳು ಮುತ್ತಿಗೆ ಹಾಕಿವೆ. ಮುತ್ತಿಗೆ ಹಾಕಿದ ಉಕ್ರೇನಿಯನ್ ಬಂದರು ಪ್ರದೇಶಗಳಿಂದ ಜನರ ಸ್ಥಳಾಂತರ ಮಾಡಲಾಗುತ್ತಿದೆ. ಮಂಗಳವಾರದಂದು ಅಂದಾಜು 20,000 ನಾಗರಿಕರು ಮಾನವೀಯ ಕಾರಿಡಾರ್ ಮೂಲಕ ಮರಿಯುಪೋಲ್‌ನಿಂದ ಸ್ಥಳಾಂತರಗೊಂಡಿದ್ದಾರೆ. ಆದರೆ, ರಷ್ಯಾದ ಪಡೆಗಳು ಕೀವ್​ನಲ್ಲಿ ತಮ್ಮ ಬಾಂಬ್ ದಾಳಿಯನ್ನು ಹೆಚ್ಚಿಸಿವೆ. ಅಪಾರ್ಟ್‌ಮೆಂಟ್‌ಗಳು, ಸುರಂಗಮಾರ್ಗ, ನಾಗರಿಕ ತಾಣಗಳು, ಬಹುಮಹಡಿ ಕಟ್ಟಡಗಳು ಸೇರಿದಂತೆ ಹೆಚ್ಚಿನ ಮೂಲ ಸೌಕರ್ಯಗಳನ್ನು ರಷ್ಯಾ ಪಡೆ ಧ್ವಂಸಗೊಳಿಸಿವೆ.

ಉನ್ನತ ಉಕ್ರೇನಿಯನ್ ಸಮಾಲೋಚಕ, ಉಕ್ರೇನ್​​ ಅಧ್ಯಕ್ಷರ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್, ರಷ್ಯನ್ನರೊಂದಿಗಿನ ಇತ್ತೀಚಿನ ಮಾತುಕತೆಗಳನ್ನು ಬಹಳ ಕಷ್ಟಕರ ಮತ್ತು ಜಿಗುಟಾದ ಮಾತುಕತೆ ಎಂದು ವಿವರಿಸಿದ್ದಾರೆ. ಉಭಯ ದೇಶಗಳ ನಡುವೆ ವಿರೋಧಾಭಾಸಗಳಿವೆ. ಆದರೆ, ರಾಜಿ ಮಾಡಿಕೊಳ್ಳಲು ಖಂಡಿತವಾಗಿಯೂ ಅವಕಾಶವಿದೆ ಎಂದು ಹೇಳಿದರು. ಬುಧವಾರ(ಇಂದು) ಮಾತುಕತೆ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

ಇನ್ನು ಮಂಗಳವಾರ ಪೋಲೆಂಡ್ ಪ್ರಧಾನಿ ಮಾಟ್ಯೂಸ್ಜ್ ಮೊರಾವಿಕಿ ಮತ್ತು ಉಪ ಪ್ರಧಾನಿ ಜರೋಸ್ಲಾವ್ ಕಾಸಿನ್ಸ್ಕಿ, ಜೆಕ್ ರಾಷ್ಟ್ರದ ಪ್ರಧಾನಿ ಪೆಟ್ರ್ ಫಿಯಾಲಾ ಮತ್ತು ಸ್ಲೊವೇನಿಯಾದ ಪ್ರಧಾನಿ ಜಾನೆಜ್ ಜಾನ್ಸಾ ಅವರು ಕೀವ್‌ಗೆ ತೆರಳಿದ್ದಾರೆ. ಉಕ್ರೇನ್​ಗೆ ಬೆಂಬಲ ನೀಡಲು ಈ ರಾಷ್ಟ್ರಗಳ ನಾಯಕರು ಮುಂದಾಗಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನ ಕೀವ್​ನತ್ತ ಹೊರಟ ಯೂರೋಪಿನ ಮೂರು ದೇಶಗಳ ಪ್ರಧಾನಿಗಳು

ಮರಿಯುಪೋಲ್‌ ಅತ್ಯಂತ ಹತಾಶ ಪರಿಸ್ಥಿತಿಯಲ್ಲಿದೆ. 2,300ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ಉಳಿದ ನಿವಾಸಿಗಳು ಆಹಾರ, ನೀರು ಹಾಗೂ ಇತರ ಮೂಲಭೂತ ಅಂಶಗಳಿಗಾಗಿ ಮತ್ತು ಔಷಧಕ್ಕಾಗಿ ಹೆಣಗಾಡುತ್ತಿದ್ದಾರೆ. ಮರಿಯುಪೋಲ್ ನಿಂದ 20,000 ಜನರನ್ನು 4,000 ಖಾಸಗಿ ವಾಹನಗಳಲ್ಲಿ ಮಾನವೀಯ ಕಾರಿಡಾರ್ ಮೂಲಕ ಝಪೊರಿಝಿಯಾ ನಗರಕ್ಕೆ ಸ್ಥಳಾಂತರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.