ETV Bharat / international

ಕೋವಿಡ್​ನಿಂದ ಪ್ರಪಂಚದ 132 ಕೋಟಿ​ ಜನರು ಹಸಿವಿನಿಂದ ಬಳಲಬಹುದು: UN - 132 ಮಿಲಿಯನ್​ ಜನರು ಹಸಿವು

ವಿಶ್ವಸಂಸ್ಥೆಯ ಪ್ರಕಾರ, ಕೊರೊನಾ ಬಿಕ್ಕಟ್ಟಿನಿಂದಾಗಿ ಪ್ರಪಂಚದ 132 ಮಿಲಿಯನ್​ ಜನರು ಹಸಿವಿನಿಂದ ಬಳಲಬಹುದು ಎಂದು ತಿಳಿಸಿದ್ದು, ಅದರಲ್ಲೂ ಭಾರತ ಹೆಚ್ಚು ತೊಂದರೆಗೊಳಗಾಗಲಿದೆ.

COVID-19
COVID-19
author img

By

Published : Jul 14, 2020, 8:14 PM IST

Updated : Jul 15, 2020, 12:15 PM IST

ರೋಮ್​(ಇಟಲಿ): ಪ್ರಪಂಚದಾದ್ಯಂತ ಕೊರೊನಾ ತಂದಿಟ್ಟಿರುವ ಸಂಕಷ್ಟ ಅಷ್ಟಿಷ್ಟಲ್ಲ. ಈಗಾಗಲೇ ಲಕ್ಷಾಂತರ ಜನರು ಈ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದು, ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಈ ಬಗ್ಗೆ ಇದೀಗ ವಿಶ್ವಸಂಸ್ಥೆ ಮತ್ತೊಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.

ವಿಶ್ವಸಂಸ್ಥೆಯ ಪ್ರಕಾರ, ಕೊರೊನಾ ಬಿಕ್ಕಟ್ಟಿನಿಂದಾಗಿ ಪ್ರಪಂಚದ 132 ಮಿಲಿಯನ್​ ಜನರು ಹಸಿವಿನಿಂದ ಬಳಲಬಹುದು ಎಂದು ತಿಳಿಸಿದ್ದು, ಅದರಲ್ಲೂ ಭಾರತ ಹೆಚ್ಚು ತೊಂದರೆಗೊಳಗಾಗಲಿದೆ.

ವಿಶ್ವಸಂಸ್ಥೆಯ ಕಾರ್ಯದರ್ಶಿ ಆಟೋನಿಯೋ ಮಾತನಾಡಿದ್ದು, ಸೋಂಕಿನ ಕಾರಣ ಇದೇ ವರ್ಷ ಇಷ್ಟೊಂದು ಜನರು ತೊಂದರೆಗೆ ಒಳಗಾಗಬಹುದು ಎಂದಿದೆ. ಕಳೆದ ಐದು ವರ್ಷದಲ್ಲಿ 60 ಮಿಲಿಯನ್​ ಜನರು ಹಸಿವಿನಿಂದ ಬಳಲಿದ್ದಾರೆ. ಈ ವರ್ಷ ಇನ್ನೂ ಹೆಚ್ಚು ಜನರು ತೀವ್ರ ಸ್ವರೂಪದ ಸಂಕಷ್ಟಕ್ಕೀಡಾಗಲಿದ್ದಾರೆ. ಸದ್ಯದ ಪರಿಸ್ಥಿತಿ ಹೀಗೆಯೇ ಮುಂದುವರೆದರೆ 2030ರ ವೇಳೆಗೆ ಪ್ರಪಂಚದ 840 ಮಿಲಿಯನ್​ ಜನರು ಅಪೌಷ್ಠಿಕತೆಯಿಂದ ಬಳಲುವ ಸಾಧ್ಯತೆ ಇದೆ ಎಂದಿದ್ದಾರೆ.

ಕೊರೊನಾ ವೈರಸ್​​​ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಿಸಿದ್ದು, ಭಾರತದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಸಂಖ್ಯೆ 60 ಮಿಲಿಯನ್​ ಆಗಿದೆ ಎಂದಿದ್ದಾರೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ), ಕೃಷಿ ಅಭಿವೃದ್ಧಿ ಅಂತಾರಾಷ್ಟ್ರೀಯ ನಿಧಿ (ಐಎಫ್‌ಎಡಿ), ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್), ಯುಎನ್ ವಿಶ್ವ ಆಹಾರ ಸಂಸ್ಥೆ (ಡಬ್ಲ್ಯುಎಫ್‌ಪಿ) ಮತ್ತು ವಿಶ್ವ ಆರೋಗ್ಯ ಸಂಘಟನೆ ಜಂಟಿಯಾಗಿ ಈ ವರದಿ ಸಿದ್ಧಪಡಿಸಿದೆ.

Last Updated : Jul 15, 2020, 12:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.