ಸನಾ: ಯುಎಇ ಮೇಲೆ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯ ಹೊಣೆಯನ್ನು ಭಾನುವಾರ ಹೌತಿ ಸೇನಾಪಡೆ ಹೊತ್ತುಕೊಂಡಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯುಎಇ ರಕ್ಷಣಾ ಸಚಿವಾಲಯವು ಈ ಬ್ಯಾಲಿಸ್ಟಿಕ್ ಕ್ಷಿಪಣಿ ತಡೆದು ಹೊಡೆದುರುಳಿಸಿದೆ. ಘಟನೆಯಿಂದ ಯಾವುದೇ ಸಾವು ನೋವುಗಳ ವರದಿಗಳಾಗಿಲ್ಲ ಎಂದು ಯುಎಇ ಅಧಿಕೃತ ಮಾಧ್ಯಮ ವರದಿ ಮಾಡಿದೆ.
ಯುಎಇ, ಹೌತಿ ಬಂಡುಕೋರರ ವಿರುದ್ಧದ ಹೋರಾಟದಲ್ಲಿ ಯೆಮೆನ್ ಸರ್ಕಾರವನ್ನು ಬೆಂಬಲಿಸುತ್ತಿರುವ ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟ ಪ್ರಮುಖ ಭಾಗವಾಗಿದೆ. ಕಳೆದ ಎರಡು ವಾರದಲ್ಲಿ ಸೌದಿ ನೇತೃತ್ವದ ಅರಬ್ ಒಕ್ಕೂಟದ ಪ್ರಮುಖ ಸದಸ್ಯರು ಯುಎಇ ವಿರುದ್ಧ ನಡೆಸಿದ ಮೂರನೇ ಕ್ಷಿಪಣಿ ದಾಳಿ ಇದಾಗಿದೆ.
ಈ ಹಿಂದೆ ಅರಬ್ ಎಮಿರೇಟ್ಸ್ (ಯುಎಇ)ನ ರಾಜಧಾನಿ ಅಬುಧಾಬಿಯ ಪೆಟ್ರೋಲ್ ಟ್ಯಾಂಕ್‌ಗಳ ಮೇಲೆ ಇರಾನ್ ಬೆಂಬಲಿತ ಯೆಮೆನ್ ಮೂಲದ ಹೌತಿ ಬಂಡುಕೋರರು ನಡೆಸಿದ್ದ ಡ್ರೋನ್ ದಾಳಿಯಲ್ಲಿ ಮೂವರು ಸಾವನ್ನಪ್ಪಿ, ಆರು ಜನರು ಗಾಯಗೊಂಡಿದ್ದರು.
ಇರಾನ್ ಬೆಂಬಲಿತ ಯೆಮೆನ್ ಹೌತಿ ಸೇನೆಯು ಯೆಮನ್‌ನಲ್ಲಿ ಹಲವಾರು ಆಯಕಟ್ಟಿನ ಜಿಲ್ಲೆಗಳನ್ನು ಕಳೆದುಕೊಂಡ ನಂತರ ಯುಎಇ ಮತ್ತು ಸೌದಿ ಅರೇಬಿಯಾ ಮೇಲೆ ಗಡಿಯಾಚೆಗಿನ ಕ್ಷಿಪಣಿ ದಾಳಿಯನ್ನು ತೀವ್ರಗೊಳಿಸಿದೆ.
ಕಳೆದ ಜ. 21 ರಂದು ಯೆಮೆನ್ನ ಸಾದಾ ಜೈಲಿನ ಮೇಲೆ ಬಂಡುಕೋರರು ವೈಮಾನಿಕ ದಾಳಿ ನಡೆಸಿದ್ದರು. ಈ ವೇಳೆ, 100ಕ್ಕೂ ಅಧಿಕ ಕೈದಿಗಳು ಮೃತಪಟ್ಟಿದ್ದು, 200ಕ್ಕೂ ಅಧಿಕ ಕೈದಿಗಳು ಗಾಯಗೊಂಡಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ