ಬೀಜಿಂಗ್: ಕೊರೊನಾ ವೈರಸ್ ಚೀನಾದ ಆರ್ಥಿಕ ಅಭಿವೃದ್ಧಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಫೋನ್ ಸಂಭಾಷಣೆ ಮೂಲಕ ಡೊನಾಲ್ಡ್ ಟ್ರಂಪ್‌ಗೆ ತಿಳಿಸಿದ್ದಾರೆ.
'ಚೀನಾದ ಆರ್ಥಿಕತೆ ಸುಸ್ಥಿರವಾದ ರೀತಿ ಅಭಿವೃದ್ಧಿಯಾಗುತ್ತಿದೆ. ಇದರಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆಯಾಗುವುದಿಲ್ಲ' ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆಂದು ಚೀನಾ ಸೆಂಟ್ರಲ್ ಟೆಲಿವಿಷನ್ ವರದಿ ಮಾಡಿದೆ.
ಕೊರೊನಾ ವೈರಸ್ -2019-ಎನ್‌ಸಿಒವಿ-ಡಿಸೆಂಬರ್‌ನಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿತ್ತು. ಅಂದಿನಿಂದ ಇದು 25 ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಚೀನಾದಲ್ಲಿ ಈ ವೈರಸ್ ಈಗಾಗಲೇ 636 ಜನರನ್ನು ಬಲಿತೆಗೆದುಕೊಂಡಿದೆ. 31,000ಕ್ಕೂ ಹೆಚ್ಚು ಜನ ಸೋಂಕಿನಿಂದ ಬಳಲುತ್ತಿದ್ದಾರೆ.