ETV Bharat / international

ಪ್ರಧಾನಿ ಮೋದಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್​ ಸಿಂಪತಿ ಸಂದೇಶ! - ಭಾರತಕ್ಕೆ ಸಹಾನುಭೂತಿ ತೋರಿದ ಚೀನಾ ಅಧ್ಯಕ್ಷ

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಬೆಂಬಲ ಮತ್ತು ಸಹಾಯವನ್ನು ಒದಗಿಸಲು ಚೀನಾ ಸಿದ್ಧವಾಗಿದೆ. ಭಾರತ ಸರ್ಕಾರದ ನಾಯಕತ್ವದಲ್ಲಿ ಭಾರತೀಯ ಜನರು ಸಾಂಕ್ರಾಮಿಕ ರೋಗವನ್ನು ಸೋಲಿಸಿ ಮೇಲುಗೈ ಸಾಧಿಸುತ್ತಾರೆ ಎಂದು ನಾನು ನಂಬುತ್ತೇನೆ..

modi
modi
author img

By

Published : Apr 30, 2021, 7:55 PM IST

ಬೀಜಿಂಗ್ ​: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಂಪತಿ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಭಾರತದ ಚೀನಾದ ರಾಯಭಾರಿ ಸನ್ ವೀಡಾಂಗ್ ಶುಕ್ರವಾರ ಹೇಳಿದ್ದಾರೆ.

ಭಾರತದಲ್ಲಿ ಇತ್ತೀಚಿನ ಕೋವಿಡ್ ಪರಿಸ್ಥಿತಿಯ ಬಗ್ಗೆ ತಮ್ಮ ಕಳವಳವನ್ನು ತೋರಿಸಿದ ಚೀನಾದ ಅಧ್ಯಕ್ಷರು, ಭಾರತ ಸರ್ಕಾರ ಮತ್ತು ಭಾರತೀಯರಿಗೆ ತಮ್ಮ ಪ್ರಾಮಾಣಿಕ ಸಹಾನುಭೂತಿಯನ್ನು ವ್ಯಕ್ತಪಡಿಸಿದರು. ಜಿನ್‌ಪಿಂಗ್ "ಭಾರತದಲ್ಲಿ ಇತ್ತೀಚಿನ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ನನಗೆ ತುಂಬಾ ಕಾಳಜಿ ಇದೆ.

ಚೀನಾ ಸರ್ಕಾರ ಮತ್ತು ಜನರ ಪರವಾಗಿ, ಹಾಗೆಯೇ ನನ್ನ ಹೆಸರಿನಲ್ಲಿ, ನಾನು ಭಾರತ ಸರ್ಕಾರಕ್ಕೆ ಹಾಗೂ ಅಲ್ಲಿನ ಜನರಿಗೆ ಪ್ರಾಮಾಣಿಕ ಸಹಾನುಭೂತಿಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದಿದ್ದಾರೆ.

ಐಕ್ಯತೆ ಮತ್ತು ಸಹಕಾರದ ಮೂಲಕ ಮಾತ್ರ ವಿಶ್ವದಾದ್ಯಂತದ ದೇಶಗಳು ಅಂತಿಮವಾಗಿ ಸಾಂಕ್ರಾಮಿಕ ರೋಗವನ್ನು ಸೋಲಿಸಬಹುದು" ಎಂದು ಚೀನಾದ ಅಧ್ಯಕ್ಷ ಹೇಳಿದ್ದಾರೆ ಎಂದು ಸನ್ ವೀಡಾಂಗ್ ತಿಳಿಸಿದ್ದಾರೆ.

"ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಬೆಂಬಲ ಮತ್ತು ಸಹಾಯವನ್ನು ಒದಗಿಸಲು ಚೀನಾ ಸಿದ್ಧವಾಗಿದೆ. ಭಾರತ ಸರ್ಕಾರದ ನಾಯಕತ್ವದಲ್ಲಿ ಭಾರತೀಯ ಜನರು ಸಾಂಕ್ರಾಮಿಕ ರೋಗವನ್ನು ಸೋಲಿಸಿ ಮೇಲುಗೈ ಸಾಧಿಸುತ್ತಾರೆ ಎಂದು ನಾನು ನಂಬುತ್ತೇನೆ" ಎಂಬ ಟ್ವೀಟ್‌ನ ಸನ್ ವೀಡಾಂಗ್ ಹಂಚಿಕೊಂಡಿದ್ದಾರೆ.

ಈ ಹಿಂದೆ, ಚೀನಾದ ರಾಯಭಾರಿ ಜನರಲ್ ಕಸ್ಟಮ್ಸ್ ಆಫ್ ಚೀನಾ ಅಂಕಿ-ಅಂಶಗಳ ಪ್ರಕಾರ, ರಾಷ್ಟ್ರವು 5,000ಕ್ಕೂ ಹೆಚ್ಚು ವೆಂಟಿಲೇಟರ್‌ಗಳು, 21,569 ಆಮ್ಲಜನಕ ಉತ್ಪಾದಕಗಳು, 21.48 ದಶಲಕ್ಷಕ್ಕೂ ಹೆಚ್ಚು ಮಾಸ್ಕ್​ ಮತ್ತು ಸುಮಾರು 3,800 ಟನ್ ಔಷಧಿಗಳನ್ನು ಏಪ್ರಿಲ್‌ನಲ್ಲಿ ಭಾರತಕ್ಕೆ ಪೂರೈಸಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.