ETV Bharat / international

ಮಹಿಳೆಯರು ಸಚಿವರಾಗಲು ಸಾಧ್ಯವಿಲ್ಲ; ಅವರು ಮಕ್ಕಳಿಗೆ ಜನ್ಮ ನೀಡುತ್ತಿರಬೇಕು: ತಾಲಿಬಾನ್​​

ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಪ್ರಾತಿನಿಧ್ಯ ನೀಡಲು ಸಾಧ್ಯವಿಲ್ಲ. ಅವರು ಮಕ್ಕಳಿಗೆ ಜನ್ಮ ನೀಡುತ್ತಿರಬೇಕು ಎಂದು ತಾಲಿಬಾನ್​ ವಕ್ತಾರ ಹೇಳಿಕೆ ನೀಡಿದ್ದಾನೆ.

taliban women
taliban women
author img

By

Published : Sep 10, 2021, 8:46 PM IST

ಕಾಬೂಲ್​​(ಅಫ್ಘಾನಿಸ್ತಾನ): ಕ್ರೀಡೆಯಿಂದ ದೇಹ ಪ್ರದರ್ಶನವಾಗಲಿದೆ ಎಂಬ ಕಾರಣ ನೀಡಿ ಈಗಾಗಲೇ ಮಹಿಳಾ ಕ್ರಿಕೆಟ್​ ಬ್ಯಾನ್ ಮಾಡಿ ಕಟ್ಟಪ್ಪಣೆ ಹೊರಡಿಸಿರುವ ಬೆನ್ನಲ್ಲೇ ತಾಲಿಬಾನ್​ ಮತ್ತೊಂದು ನಿರ್ಧಾರ ಕೈಗೊಂಡಿದೆ.

ಮಹಿಳೆಯರು ಸಚಿವರಾಗಲು ಸಾಧ್ಯವಿಲ್ಲ. ಅವರು ಮಕ್ಕಳನ್ನು ಹೆರುತ್ತಿರಬೇಕು ಅನ್ನೋದು ತಾಲಿಬಾನ್ ನಿಲುವು. ಅಫ್ಘಾನಿಸ್ತಾನದಲ್ಲಿ ನೂತನವಾಗಿ ಸರ್ಕಾರ ರಚಿಸಿರುವ ತಾಲಿಬಾನ್​​ ಸಚಿವ ಸಂಪುಟದಲ್ಲಿ ತಮಗೂ ಸ್ಥಾನಮಾನ ನೀಡುವಂತೆ ಅಲ್ಲಿನ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ವಕ್ತಾರನೊಬ್ಬ ಈ ರೀತಿಯ ಹೇಳಿಕೆ ನೀಡಿದ್ದಾನೆ.

  • A Taliban spokesman on @TOLOnews: "A woman can't be a minister, it is like you put something on her neck that she can't carry. It is not necessary for a woman to be in the cabinet, they should give birth & women protesters can't represent all women in AFG."
    Video with subtitles👇 pic.twitter.com/CFe4MokOk0

    — Natiq Malikzada (@natiqmalikzada) September 9, 2021 " class="align-text-top noRightClick twitterSection" data=" ">

ಸುದ್ದಿವಾಹಿನಿ ಜೊತೆ ಮಾತನಾಡಿರುವ ತಾಲಿಬಾನ್​ ವಕ್ತಾರ ಸೈಯ್ಯದ್ ಜೆಕ್ರುಲ್ಲಾ ಹಶಿಮಿ, ಹೊಸದಾಗಿ ರಚನೆಯಾಗಿರುವ ಸಚಿವ ಸಂಪುಟದಲ್ಲಿ ಮಹಿಳೆಯರು ಇರುವ ಅಗತ್ಯವಿಲ್ಲ. ಅವರಿಗೆ ನೀಡುವ ಜವಾಬ್ದಾರಿ ನಿಭಾಯಿಸಲು ಅವರಿಂದ ಸಾಧ್ಯವಾಗದು. ಹೀಗಾಗಿ ಮಹಿಳೆಯರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದು ಅಸಾಧ್ಯ ಎಂದು ತಿಳಿಸಿದ್ದಾನೆ.

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಗೆ ಯಾವುದೇ ರೀತಿಯ ಮನ್ನಣೆ ಇಲ್ಲ. ಈ ದೇಶದ ಮಹಿಳೆಯರು ಮಕ್ಕಳನ್ನು ಮಾತ್ರ ಹೆರಬೇಕು. ಹೀಗಾಗಿ ಅವರಿಗೆ ಯಾವುದೇ ರೀತಿಯ ಸ್ಥಾನಮಾನ ನೀಡುವುದಿಲ್ಲ ಎಂದು ತಿಳಿಸಿದ್ದಾನೆ.

ಇದನ್ನೂ ಓದಿ: ದ್ವೇಷ ಭಾಷಣ ಪ್ರಕರಣ: ಛತ್ತೀಸ್​​ಗಢ ಸಿಎಂ ತಂದೆಗೆ ಜಾಮೀನು ಮಂಜೂರು

ಈ ಹಿಂದೆ 1996ರಿಂದ 2001ರವರೆಗೆ ಆಡಳಿತ ನಡೆಸಿರುವ ತಾಲಿಬಾನ್​ ಮಹಿಳೆಯರ ಮೇಲೆ ಅನೇಕ ರೀತಿಯ ಕ್ರೂರ ನಿರ್ಬಂಧಗಳನ್ನು ವಿಧಿಸಿತ್ತು. ಇದೀಗ ಅದೇ ರೀತಿಯ ನಿರ್ಬಂಧಗಳನ್ನು ಮತ್ತೆ ಹೇರಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.