ETV Bharat / international

ಕೊರೊನಾ ಮಾರಿ ವಿರುದ್ಧ ಜತೆಯಾಗಿ ಹೋರಾಡೋಣ: ಭಾರತದತ್ತ ಪಾಕ್ ಪ್ರಧಾನಿ ಒಗ್ಗಟ್ಟಿನ ಮಂತ್ರ! ​ - ಎಧಿ ಫೌಂಡೇಷನ್

COVID-19 ರ ಮಾರಕ ತರಂಗವನ್ನು ಎದುರಿಸುತ್ತಿರುವ ಭಾರತೀಯ ಜನರೊಂದಿಗೆ ನನ್ನ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇನೆ. ನಮ್ಮ ನೆರೆಹೊರೆಯವರು ಸೇರಿದಂತೆ ವಿಶ್ವದಾದ್ಯಂತ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರ ಶೀಘ್ರ ಚೇತರಿಕೆಗಾಗಿ ನಾವು ಪ್ರಾರ್ಥಿಸುತ್ತೇವೆ. ಮಾನವೀಯತೆಯ ಈ ಉಪದ್ರವವನ್ನು ನಾವು ಒಟ್ಟಾಗಿ ಹೋರಾಡಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್​ ಖಾನ್ ಟ್ವೀಟ್ ಮಾಡಿದ್ದಾರೆ.

Imran Khan
Imran Khan
author img

By

Published : Apr 24, 2021, 5:39 PM IST

ಇಸ್ಲಾಮಾಬಾದ್​: ಕೊರೊನಾ ವೈರಸ್​ ಎರಡನೇ ಅಲೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತದೊಂದಿಗೆ ತಮ್ಮ ಒಗ್ಗಟ್ಟಿನ ಅಭಿಮತ ವ್ಯಕ್ತಪಡಿಸಿದ್ದಾರೆ.

ಕೋವಿಡ್-19 ಮಾರಕ ಅಲೆಯನ್ನು ಎದುರಿಸುತ್ತಿರುವ ಭಾರತೀಯ ಜನರೊಂದಿಗೆ ನನ್ನ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇನೆ ಎಂದು ಇಮ್ರಾನ್ ಖಾನ್ ಉರ್ದುವಿನಲ್ಲಿ ಟ್ವೀಟ್ ಮಾಡಿದ್ದಾರೆ.

ಕೋವಿಡ್-19 ಮಾರಕ ಅಲೆ ಎದುರಿಸುತ್ತಿರುವ ಭಾರತೀಯ ಜನರೊಂದಿಗೆ ನನ್ನ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇನೆ. ನಮ್ಮ ನೆರೆಹೊರೆಯವರು ಸೇರಿದಂತೆ ವಿಶ್ವದಾದ್ಯಂತ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರ ಶೀಘ್ರ ಚೇತರಿಕೆಗಾಗಿ ನಾವು ಪ್ರಾರ್ಥಿಸುತ್ತೇವೆ. ಮಾನವೀಯತೆಯ ಈ ಉಪದ್ರವವನ್ನು ನಾವು ಒಟ್ಟಾಗಿ ಹೋರಾಡಬೇಕಿದೆ ಎಂದಿದ್ದಾರೆ.

  • میں کوروناء (COVID-19) کی مہلک ترین لہر کاسامناکرنےوالےہندوستانی عوام سے یکجہتی کا اظہار کرتاہوں ۔ ہم اپنےہمسایوں سمیت دنیا بھر میں وباء کی زد میں آنے والوں کی جلد شفایابی کیلئے دعاگو ہیں۔ انسانیت پر حملہ آور اس آفت کا ہمیں باہم مل کر مقابلہ کرنا چاہئیے۔

    — Imran Khan (@ImranKhanPTI) April 24, 2021 " class="align-text-top noRightClick twitterSection" data=" ">

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿಭಾಯಿಸಲು ಭಾರತಕ್ಕೆ ಸಹಾಯ ಮಾಡುವಂತೆ ಪಾಕಿಸ್ತಾನದ ನಾಗರಿಕ ಸಮಾಜ ಮತ್ತು ಮಾನವೀಯ ಸಂಸ್ಥೆ ಎಡಿ ಫೌಂಡೇಶನ್ ಮಾಡಿದ ಮನವಿಯ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರ ಈ ಟ್ವೀಟ್ ಮಾಡಿದ್ದಾರೆ.

ಎಡಿ ಫೌಂಡೇಷನ್‌ನ ಅಧ್ಯಕ್ಷ ಫೈಸಲ್ ಎಡಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಆತ ಆ್ಯಂಬುಲೆನ್ಸ್‌ಗಳ ಜತೆಗೆ ವೈದ್ಯಕೀಯ ಪ್ರವೇಶಕ್ಕೆ ಅನುಮತಿ ನೀಡಲು ಕೋರಿದ್ದಾರೆ. ವೈದ್ಯಕೀಯ ತಂತ್ರಜ್ಞರು, ಕಚೇರಿ ಸಿಬ್ಬಂದಿ, ಚಾಲಕರು ಮತ್ತು ಪೋಷಕ ಸಿಬ್ಬಂದಿ ಒಳಗೊಂಡ ತಂಡ ಹೊಂದಿದೆ. ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನು ತಾವಾಗಿಯೇ ವ್ಯವಸ್ಥೆಗೊಳಿಸುವುದಾಗಿ ಎಡಿ ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಾಂಕ್ರಾಮಿಕವು ನಿಮ್ಮ ದೇಶದ ಮೇಲೆ ಉಂಟುಮಾಡಿದ ಅಸಾಧಾರಣವಾದ ಭಾರಿ ಪರಿಣಾಮದ ಬಗ್ಗೆ ಕೇಳಲು ನಮಗೆ ತುಂಬಾ ವಿಷಾದವಿದೆ. ಅಲ್ಲಿ ಅಪಾರ ಸಂಖ್ಯೆಯ ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ನಾವು ನಮ್ಮ ಸಹಾಯವನ್ನು ನೌಕಾಪಡೆಯ ರೂಪದಲ್ಲಿ ನೀಡಲು ಬಯಸುತ್ತೇವೆ. ಪ್ರಸ್ತುತ ಆರೋಗ್ಯ ಪರಿಸ್ಥಿತಿಗಳನ್ನು ಪರಿಹರಿಸಲು ಮತ್ತು ಮತ್ತಷ್ಟು ತಪ್ಪಿಸಲು ನಿಮಗೆ ಸಹಾಯ ಮಾಡಲು ನಮ್ಮ ಸೇವೆಗಳೊಂದಿಗೆ 50 ಆ್ಯಂಬುಲೆನ್ಸ್​​​​​ಗಳಿವೆ ಎಂದರು.

ಪಾಕಿಸ್ತಾನವು ಕಳೆದ 24 ಗಂಟೆಗಳಲ್ಲಿ 157 ಸಾವು ವರದಿ ಮಾಡಿದ್ದು, ಈ ಮೂಲಕ ಕೋವಿಡ್​-19 ಸಾವಿನ ಸಂಖ್ಯೆ 16,999 ಗಡಿ ದಾಟಿದೆ. ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 5,908ಕ್ಕೆ ತಲುಪಿದ್ದು, ಪಾಕಿಸ್ತಾನದಲ್ಲಿ ಸೋಂಕಿನ ಪ್ರಮಾಣ 7, 90,016ಕ್ಕೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.