ಕಾಬೂಲ್(ಅಫ್ಘಾನಿಸ್ತಾನ): ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಶುರುವಾದಾಗಿನಿಂದಲೂ ಒಂದಲ್ಲ ಒಂದು ಅಮಾನವೀಯ ಘಟನೆ ವರದಿಯಾಗುತ್ತಿವೆ. ಮಹಿಳೆಯರು, ಮಕ್ಕಳು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರ ಗೋಳಾಟ ಹೇಳತೀರದಾಗಿದೆ.
ಈ ಬೆನ್ನಲ್ಲೇ ಮನಕಲಕುವ ಸಂಗತಿಯೊಂದನ್ನು ಪತ್ರಕರ್ತರೊಬ್ಬರು ಜೈಲುವಾಸಿಗಳ ಗೋಳಾಟದ ಬಗ್ಗೆ ಬಿಚ್ಚಿಟ್ಟಿದ್ದಾರೆ. "ಅವರು ಗೋಳಾಡುವ, ಅಳುವ ಶಬ್ಧ ಗೋಡೆಗಳನ್ನು ದಾಟಿ ನಮಗೆ ಕೇಳುತ್ತದೆ. ನೋವಿನಿಂದ ಮಹಿಳೆಯರು ನರಳುವ ಶಬ್ಧ ಸಹ ಕೇಳಿದ್ದೇವೆ" ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಪ್ರತಿಭಟನೆಗಳನ್ನು ವರದಿ ಮಾಡಿದ್ದಕ್ಕಾಗಿ ತಾಲಿಬಾನಿಗಳು ಪತ್ರಕರ್ತರನ್ನು ಹೊಡೆದು ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಎಟಿಲಾಟ್ರೋಜ್ ಪತ್ರಿಕೆಯ ಇಬ್ಬರು ವರದಿಗಾರರಾದ ತಾಕಿ ದಾರ್ಯಾಬಿ ಮತ್ತು ನೇಮತುಲ್ಲಾ ನಖ್ದಿ ಅವರನ್ನು ಬುಧವಾರ ಬೆಳಿಗ್ಗೆ ಕಾಬೂಲ್‌ನ ಪಶ್ಚಿಮದಲ್ಲಿ ಮಹಿಳಾ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದಾಗ ತಾಲಿಬಾನ್ ಬಂಧಿಸಿತು.
ಪತ್ರಿಕೆಯ ಇನ್ನಿಬ್ಬರು ಪತ್ರಕರ್ತರಾದ ಅಬರ್ ಶೈಗನ್ ಮತ್ತು ಲುತ್ಫಾಲಿ ಸುಲ್ತಾನಿ ತಮ್ಮ ಸಹೋದ್ಯೋಗಿಗಳು ಎಲ್ಲಿದ್ದಾರೆ ಎಂದು ವಿಚಾರಿಸಲು ಪತ್ರಿಕೆ ಸಂಪಾದಕ ಕದಿಮ್ ಕರಿಮಿ ಜೊತೆಗೆ ಪೊಲೀಸ್ ಠಾಣೆಗೆ ಧಾವಿಸಿದರು.
ಆದರೆ ಅವರು ಪೊಲೀಸ್ ಠಾಣೆಯನ್ನು ತಲುಪಿದ ತಕ್ಷಣ, ತಾಲಿಬಾನಿಗಳು ಅವರ ಮೇಲೆ ಹಲ್ಲೆ ಮಾಡಿ, ಮೊಬೈಲ್ ಫೋನ್ ಸೇರಿದಂತೆ ಅವರ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡರು ಎಂದು ಅಲ್ ಜಜೀರಾ ವರದಿ ಮಾಡಿದೆ.
"ಕದಿಮ್ ಕರಿಮಿ ತುಂಬಾ ಕಠಿಣವಾದ ತಮ್ಮ ಜೈಲುವಾಸವನ್ನು ಮುಗಿಸಿದರು. ಆದರೆ, ಪತ್ರಕರ್ತರು ಎಂದು ತಿಳಿದ ತಕ್ಷಣ ತಾಲಿಬಾನ್ ಅವರನ್ನು ತುಂಬಾ ಕಟುವಾಗಿ ನಡೆಸಿಕೊಂಡಿತು." ಎಂದು ಪತ್ರಕರ್ತರಾದ ಅಬರ್ ಶೈಗನ್ ಹೇಳಿದ್ದಾರೆ.
ಈ ಮೂವರನ್ನು 15 ಜನರಿರುವ ಸಣ್ಣ ಹೋಲ್ಡಿಂಗ್ ಸೆಲ್‌ಗೆ ಕರೆದೊಯ್ಯಲಾಯಿತು, ಅವರಲ್ಲಿ ಇಬ್ಬರು ರಾಯಿಟರ್ಸ್ ಮತ್ತು ಟರ್ಕಿಯ ಅನಾಡೋಲು ಏಜೆನ್ಸಿಯ ವರದಿಗಾರರು ಎಂದು ಶೈಗನ್ ಹೇಳಿದರು.
"ಅವರ ಕಿರುಚಾಟ ಮತ್ತು ಗೋಳನ್ನು ನಾವು ಗೋಡೆಗಳ ಮೂಲಕ ಕೇಳಬಹುದು" ಎಂದು ಹೇಳಿದರು. ಬೆನ್ನು, ಕಾಲುಗಳು ಮತ್ತು ಮುಖವು ಆಳವಾದ ಕೆಂಪು ಗಾಯಗಳಿಂದ ಆವೃತವಾಗಿದ್ದು, ನಖ್ದಿಯ ಎಡಗೈ, ಮೇಲಿನ ಬೆನ್ನು, ಮೇಲಿನ ಕಾಲುಗಳು ಮತ್ತು ಮುಖವು ಹೆಪ್ಪುಗಟ್ಟಿತ್ತು ಎಂದು ವರದಿ ಹೇಳಿದೆ.
ಹಿಂಸೆ ಎಷ್ಟು ಕ್ರೂರವಾಗಿತ್ತು ಎಂದರೆ ನಖ್ದಿ ಮತ್ತು ದರಿಯಾಬಿ ನೋವಿನಿಂದ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.