ಕಾಬೂಲ್(ಅಫ್ಘಾನಿಸ್ತಾನ): ಪಾಕಿಸ್ತಾನದ ತಾಲಿಬಾನ್ ಜೊತೆಗಿನ ಒಡನಾಟವನ್ನು ತೋರಿಸುವ ಮೂಲಕ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ಮುಖ್ಯಸ್ಥ ಫೈಜ್ ಹಮೀದ್, ತಾಲಿಬಾನ್ ನಾಯಕನ ಜತೆ ಪ್ರಾರ್ಥನೆ ಮಾಡುವ ದೃಶ್ಯ ವೈರಲ್ ಆಗಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ಫೋಟೋಗಳಲ್ಲಿ ಹಮೀದ್ ತಾಲಿಬಾನ್ ಇಮಾಮ್ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮಾಧ್ಯಮ ವರದಿಗಳು ವೈರಲ್ ಚಿತ್ರಗಳಲ್ಲಿ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಮತ್ತು ಗುಂಪಿನ ಶೇಖ್ ಅಬ್ದುಲ್ ಹಕೀಮ್ ಕೂಡ ಸೇರಿದ್ದಾರೆ. ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದ ಮೊದಲ ಅತಿಥಿ ರಾಷ್ಟ್ರ ಪಾಕಿಸ್ತಾನ ಎಂದು ವರದಿಗಳು ಸೂಚಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಕಂಡು ಬಂದಿದೆ.
ತಾಲಿಬಾನ್ ಮತ್ತು ಹಜಾರ ಮತ್ತು ತಾಜಿಕ್ ನಾಯಕರ ನಡುವೆ ಮಾತುಕತೆ ನಡೆಸಲು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಭಾನುವಾರ ಕಾಬೂಲ್‌ಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ಓದಿ: ಅಮೆರಿಕನ್ನರು ಕಾಬೂಲ್ ಏರ್ಪೋರ್ಟ್ಗೆ ಪ್ರಯಾಣಿಸುವುದನ್ನ ನಿಯಂತ್ರಿಸಿ: ISIS ಬೆದರಿಕೆ