ETV Bharat / international

ಸೇನೆ ಹಿಂತೆಗೆತದ ನಂತರವೂ ಸ್ವಲ್ಪ ಸೇನೆ ನಿಯೋಜಿಸಲು ಅಮೆರಿಕ ಅಧಿಕಾರಿಗಳ ಸಲಹೆ: ಬೈಡನ್ ನಿರಾಕರಣೆ - Afghanistan withdrawal

ಮೊದಲ ಹಂತದಲ್ಲಿ ಅಮೆರಿಕ ಸೇನೆಯನ್ನು ಹಿಂತೆಗೆದುಕೊಂಡಾಗ ಇದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಆಫ್ಘನ್ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿ, ಸರ್ಕಾರ ಪತನವಾಗಬಹುದು ಎಂದು ಮೆಕೆಂಜಿ ಅಭಿಪ್ರಾಯಪಟ್ಟಿದ್ದರು.

US military generals say they advised Biden to keep 2,500 troops in Afghanistan, contradict President's comments
ಸೇನೆ ಹಿಂತೆಗೆತದ ನಂತರವೂ ಸ್ವಲ್ಪ ಸೇನೆ ನಿಯೋಜಿಸಲು ಅಮೆರಿಕ ಅಧಿಕಾರಿಗಳ ಸಲಹೆ: ಬೈಡನ್ ನಿರಾಕರಣೆ
author img

By

Published : Sep 29, 2021, 9:46 AM IST

ವಾಷಿಂಗ್ಟನ್(ಅಮೆರಿಕ): ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆ ಹಿಂದಕ್ಕೆ ಪಡೆದ ನಂತರವೂ ಸುಮಾರು 2,500 ಸಾವಿರ ಸೈನಿಕರನ್ನು ಅಲ್ಲಿಯೇ ನಿಯೋಜಿಸಬೇಕೆಂದು ಜೋ ಬೈಡನ್​ಗೆ ಸಲಹೆ ನೀಡಲಾಗಿತ್ತು ಎಂದು ಅಮೆರಿಕ ಮಿಲಿಟರಿ ಅಧಿಕಾರಿಯೊಬ್ಬರು ಅಮೆರಿಕ ಸಂಸತ್​ಗೆ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆರ್ಮಿ ಜನರಲ್ ಆಸ್ಟಿನ್ ಮಿಲ್ಲರ್ ಸಲಹೆಯಂತೆ ಅಫ್ಘಾನಿಸ್ತಾನದಲ್ಲಿ ಸುಮಾರು 2,500 ಮಂದಿ ಸೈನಿಕರನ್ನು ಅಲ್ಲಿಯೇ ಬಿಡಲು ಜಂಟಿ ಸೇನಾ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲೇ ಮತ್ತು ಅಮೆರಿಕದ ಅಮೆರಿಕನ್ ಸೆಂಟ್ರಲ್ ಕಮಾಂಡ್ ಜನರಲ್​ ಫ್ರಾಂಕ್ ಮೆಕೆಂಜಿ ಒಪ್ಪಿಕೊಂಡಿದ್ದರೂ, ಬೈಡನ್​ಗೆ ತಮ್ಮ ವೈಯಕ್ತಿಕ ಅಭಿಪ್ರಾಯ ನೀಡಲು ನೀಡಲು ಸಾಧ್ಯವಾಗಲಿಲ್ಲ ಎಂದು ದಿ ಹಿಲ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಅಮೆರಿಕದಲ್ಲಿ ಸೇನಾ ಹಿಂತೆಗೆತ ಬಗ್ಗೆ ಬೈಡನ್ ಘೋಷಿಸಿದಾಗ 'ನಾನು ನನ್ನ ವೈಯಕ್ತಿಕ ಅಭಿಪ್ರಾಯವನ್ನು ಜೋ ಬೈಡನ್ ಅವರೊಂದಿಗೆ ಹಂಚಿಕೊಂಡಿಲ್ಲ. ಆದರೂ ಪ್ರಾಮಾಣಿಕ ಅಭಿಪ್ರಾಯವನ್ನು ನೀಡಿದ್ದೆ. ಅಫ್ಘಾನಿಸ್ತಾನದಲ್ಲಿ 2,500 ಸೈನಿಕರನ್ನು ನಿಯೋಜನೆ ಮಾಡಲು ನಾನು ಶಿಫಾರಸು ಮಾಡಿದ್ದೇನೆ. ಇದಕ್ಕೂ ಮೊದಲೇ 2020ರಲ್ಲಲಿ 4,500 ಮಂದಿಯನ್ನ ನಿಯೋಜನೆ ಮಾಡಲು ನಾನು ಶಿಫಾರಸು ಮಾಡಿದ್ದೆನು. ಇದೆಲ್ಲಾ ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಮೆಕೆಂಜಿ ಹೇಳಿದ್ದಾರೆ.

ಮೊದಲ ಹಂತದಲ್ಲಿ ಸೇನೆಯನ್ನು ಹಿಂತೆಗೆದುಕೊಂಡಾಗ ಇದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಆಫ್ಘನ್ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿ, ಸರ್ಕಾರ ಪತನವಾಗಬಹುದು ಎಂದು ಮೆಕೆಂಜಿ ಹೇಳಿದ್ದರು.

ಬೈಡನ್ ಮತ್ತು ಮೆಕೆಂಜಿ ನಡುವಿನ ಚರ್ಚೆಯಲ್ಲಿ ತಾಲಿಬಾನ್ ಮತ್ತು ಆಫ್ಘನ್ ಸರ್ಕಾರದ ನಡುವೆ ಶಾಂತಿ ನೆಲೆಸುವಂತೆ ಮಾಡಲು ಅಲ್ಲಿ ಸೇನೆಯನ್ನು ನಿಯೋಜಿಸಬೇಕು ಎಂದು ಹೇಳಿದ್ದರು. ಆದರೆ, ಜೋ ಬೈಡನ್ ಅಮೆರಿಕನ್ ರಕ್ಷಣಾ ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸಿದ್ದರು. ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿ ಅಫ್ಘಾನಿಸ್ತಾನದಲ್ಲಿ ಯುದ್ಧವವನ್ನು ಕೊನೆಗಾಣಿಸುವುದೇ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿ ಎಂದಿದ್ದರು.

ಇದನ್ನೂ ಓದಿ: ಜೈಲಿನಲ್ಲಿ ಗನ್, ಸ್ಫೋಟಕ, ಚಾಕುಗಳಿಂದ ಮಾರಾಮಾರಿ: 24 ಮಂದಿ ಸಾವು, 48 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.